ಮುಕ್ಕಚ್ಚೇರಿ ಡೈಮಂಡ್ ಸ್ಪೋರ್ಟ್ಸ್, ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಪುಸ್ತಕ ವಿತರಣೆ

ಉಳ್ಲಾಲ, ಜೂ. 1: ಉಳ್ಳಾಲ ಮುಕ್ಕಚ್ಚೇರಿ ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಉಳ್ಳಾಲ ಒಂಭತ್ತುಕೆರೆಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ದೇವರು ಮೆಚ್ಚುವ ಕಾರ್ಯವಾಗಿದೆ, ಈ ನಿಟ್ಟಿನಲ್ಲಿ ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಅವರ ಕೆಲಸವು ಶ್ಲಾಘನೀಯವಾಗಿದೆ ಎಂದರು.
ಕಳೆದ 24 ವರ್ಷದಿಂದ ಉಳ್ಳಾಲ ಮುಕ್ಕಚ್ಚೇರಿ ಅಂಗನವಾಡಿ ಕಾರ್ಯಕರ್ತೆಯಾಗಿ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನಸಾಮಾನ್ಯರಿಗೆ ಒದಗಿಸುವ ಕೆಲಸವನ್ನು ನಿರ್ವಹಿಸುತ್ತಿರುವ ಶ್ರೀಮತಿ ಧರ್ಮಿಣಿಯವರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಶ್ರೀ ಯು.ಬಿ. ಮಾರಪ್ಪ, ಉಳ್ಳಾಲ ನಗರ ಸಭೆ ಸದಸ್ಯ ಮುಹಮ್ಮದ್ ಮುಕ್ಕಚ್ಚೇರಿ, ಶಾಲಾ ಮುಖ್ಯೋಪದ್ಯಾಯಿನಿ ಪುಷ್ಪಾ, ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಉಪಾಧ್ಯಕ್ಷ ಖಾಲೀದ್, ವ್ಯವಸ್ಥಾಪಕ ಇಂಮ್ತಿಯಾಝ್ ಶೇಖ್,ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಹನೀಫ್ ಗೋವಾ, ಇಂಮ್ತಿಯಾಝ್, ಸಿದ್ದೀಕ್, ಇಜಾಝ್, ಶಂಶುದ್ದೀನ್, ಸರ್ಫಾರ್, ತಾಹೀರ್ ಮೊದಲಾದವರು ಉಪಸ್ಥಿತರಿದ್ದರು.
ಡೈಮಂಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಅಧ್ಯಕ್ಷ ಖಲೀಲ್ ಇಬ್ರಾಹಿಂ ಪ್ರಾಸ್ತವಿಕವಾಗಿ ಮಾತನಾಡಿದರು, ರಿಯಾಜ್ ಉಳ್ಳಾಲ ಸ್ವಾಗತಿಸಿ ನಿರೂಪಿಸಿದರು.







