ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಹುಟ್ಟಹಬ್ಬ ಆಚರಣೆ

ಕೊಳ್ಳೇಗಾಲ,ಜೂ.01: ಪಟ್ಟಣದಲ್ಲಿ ಬಿಎಸ್ಪಿ ರಾಜಾಧ್ಯಕ್ಷ ಹಾಗೂ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಮಹೇಶ್‍ರವರ 63ನೇ ಹುಟ್ಟಹಬ್ಬವನ್ನು ಶುಕ್ರವಾರ ಅವರ ಕಾಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಣೆ ಮಾಡಿದರು.
ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ನಂತರ ಎಸ್‍ಡಿಎ ವಾಕ್ ಮತ್ತು ಶ್ರವಣ ವಸತಿ ಶಾಲೆಯ ಹಾಗೂ ಕರುಣಾಲಯ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಬಿಎಸ್ಪಿ ಕಾಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಶಾಸಕ ಎನ್.ಮಹೇಶ್ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಉಪಾನ್ಯಾಸಕರುಗಳು ಹಾಗೂ ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿ ಶಾಸಕರಿಗೆ ಶಾಲು, ಹಾರ, ಮೈಸೂರು ಪೇಟ ಹಾಕುವ ಮೂಲಕ ಹುಟ್ಟುಹಬ್ಬ ಶುಭಾಶಯವನ್ನು ಕೋರಿದರು.
ನಂತರ ಶಾಸಕ ಎನ್.ಮಹೇಶ್ ಮಾತನಾಡಿ, ನನ್ನ ನೆಚ್ಚಿನ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗಾಗಿ ಸಂತೋಷಕ್ಕಾಗಿ ನನ್ನ ಹುಟ್ಟುಹಬ್ಬವನ್ನು ಅವರ ಸಮ್ಮುಖದಲ್ಲಿ ಆಚರಣೆ ಮಾಡಿಕೊಂಡಿದ್ದೇನೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇದ್ದರೂ ಸಹಾ ಫ್ಯಾನ್ ಸ್ಥಗಿತವಾಗಿರುವುದು ಬಹಳ ಬೇಸರದ ಸಂಗತಿ. ನನ್ನ ಹುಟ್ಟುಹಬ್ಬವಾದ್ದರಿಂದ ಭೇಟಿ ನೀಡಿ ಹೋಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿನ ಆಡಳಿತವನ್ನು ಸರಿಪಡಿಸುವಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ಬಸವಣ್ಣ, ಗಣಿಉದ್ಯಮಿ ವೀರಮಾಧು, ತಿಮ್ಮರಾಜೀಪು ಪುಟ್ಟಣ್ಣ, ಉಪ್ಪಾರ ಮುಖಂಡ ವಕೀಲ ವೆಂಕಟಚಾಲ, ವಕೀಲ ಮೋಹನ್ ಕುಮಾರ್, ಸಿದ್ದೇಶ್‍ಬಾಬು, ಟೌನ್ ಅಧ್ಯಕ್ಷ ಜಕಾವುಲ್ಲಾ, ತಾಲೂಕು ಅಧ್ಯಕ್ಷ ಶಿವನಂಜಪ್ಪ, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಸೋಮಣ್ಣ ಉಪ್ಪಾರ್, ನಗರಸಭೆ ಸದಸ್ಯರಾದ ಕೃಷ್ಣಯ್ಯ, ರಾಮಕೃಷ್ಣ, ರಂಗಸ್ವಾಮಿ, ನಾಗಸುಂದ್ರಮ್ಮ, ಮುಖಂಡರುಗಳಾದ ಸಮೀವುಲ್ಲಾ, ಸುಧಾಶಿವಮಲ್ಲು, ವೀರಭದ್ರ, ಸುರೇಶ್, ಆನಂದ್, ಬಸವಲಿಂಗಪ್ಪ, ರಾಜಶೇಖರ್, ಇಂತಿಯಾಝ್, ಜಕಾವುಲ್ಲಾ, ಸಚಿನ್, ಬಸವರಾಜು, ನಟರಾಜು, ಜಾಕಿಸೂರಿ, ಅಗಸ್ಟಿನ್, ಮೋಹನ್, ಜಯಪ್ರಕಾಶ್, ಸುರೇಶ್, ಸಿದ್ದರಾಜು ಹಾಗೂ ಇನ್ನೀತರರು ಇದ್ದರು.







