ಬಾರೆಬೆಟ್ಟು: ಎಸ್ಸೆಸ್ಸೆಫ್ ಶಾಖೆ ವತಿಯಿಂದ ರಮಝಾನ್ ಕಿಟ್ ವಿತರಣೆ
ಬಾರೆಬೆಟ್ಟು, ಜೂ. 1: ಎಸ್ಸೆಸ್ಸೆಫ್ ಬಾರೆಬೆಟ್ಟು ಶಾಖೆ ವತಿಯಿಂದ ರಮಝಾನ್ ಕಿಟ್ ವಿತರಣೆ ಇತ್ತೀಚೆಗೆ ನಡೆಯಿತು.
ಎಸ್ ವೈ ಎಸ್ ಅಧ್ಯಕ್ಷ ಹಸೈನಾರ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಝಾಕ್ ಅಮ್ಜದಿ ಸ್ವಾಗತಿಸಿದರು. ಮಹ್ಮೂದ್ ಸಅದಿ ತಾಳಿತನೂಜಿ ಸಭೆಯನ್ನು ಉದ್ಘಾಟಿಸಿದರು. ಬಾರೆಬೆಟ್ಟು ಖತೀಬ್ ಮಹ್ಮೂದ್ ಸಅದಿ ಕಿಟ್ ಗೆ ಸಹಾಯ ಸಹಕಾರ ನೀಡಿದ ಎಲ್ಲರಿಗೂ ದುಆ ನಡೆಸಿದರು.
ಕಾರ್ಯಕ್ರಮದಲ್ಲಿ ಶರೀಫ್ ಸಅದಿ, ಹಮೀದ್ ದುಬೈ, ಹನೀಫ್ ದುಬೈ, ರಝಾಕ್, ಖಾದ್ರಿ ಮತ್ತು ಎಸ್ ಎಸ್ ಎಫ್, ಎಸ್ ವೈ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ರಫೀಕ್ ಮುಹೀನಿ ವಂದಿಸಿದರು.
Next Story