Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹೊಟ್ಟೆಹುಳಗಳ ಬಾಧೆಯಿಂದ ಪಾರಾಗಲು...

ಹೊಟ್ಟೆಹುಳಗಳ ಬಾಧೆಯಿಂದ ಪಾರಾಗಲು ಉಪಾಯಗಳಿಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ2 Jun 2018 4:06 PM IST
share
ಹೊಟ್ಟೆಹುಳಗಳ ಬಾಧೆಯಿಂದ ಪಾರಾಗಲು ಉಪಾಯಗಳಿಲ್ಲಿವೆ

ಹೊಟ್ಟೆಹುಳಗಳು ಅಥವಾ ಜಂತುಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಪರಾವಲಂಬಿ ಜೀವಿಗಳು ನಮ್ಮ ಜೀರ್ಣಾಂಗ ವ್ಯೆಹದಲ್ಲಿ,ಮುಖ್ಯವಾಗಿ ಕರುಳಿನ ಭಿತ್ತಿಗಳಲ್ಲಿ ಇರುತ್ತವೆ.

ಫ್ಲಾಟ್‌ವರ್ಮ್ ಅಥವಾ ಚಪ್ಪಟೆ ಹುಳ ಮತ್ತು ರೌಂಡ್ ವರ್ಮ್ ಅಥವಾ ದುಂಡು ಹುಳಗಳು ಅತ್ಯಂತ ಸಾಮಾನ್ಯ ಜಂತುಗಳಾಗಿವೆ. ಇವು ಹೊಟ್ಟೆನೋವು,ವಾಕರಿಕೆ,ನಿಶ್ಶಕ್ತಿ ಇತ್ಯಾದಿಗಳನ್ನುಂಟು ಮಾಡುತ್ತವೆ.

ಸರಿಯಾಗಿ ಬೇಯಿಸದ ಆಹಾರ ಸೇವನೆ,ಮಲಿನ ನೀರು, ಆಹಾರದಲ್ಲಿ ಸ್ವಚ್ಛತೆಯ ಕೊರತೆ, ಮಲಿನ ಮಣ್ಣು ಅಥವಾ ನೀರಿನ ಸಂಪರ್ಕ ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸ ಇತ್ಯಾದಿಗಳು ನಮ್ಮ ಜೀರ್ಣಾಂಗ ವ್ಯೆಹದಲ್ಲಿ ಪರಾವಲಂಬಿ ಜೀವಿಗಳ ಅಭಿವೃದ್ಧಿಗೆ ಮುಖ್ಯ ಕಾರಣಗಳಾಗಿವೆ.

ಈ ಜಂತುಹುಳಗಳ ವಿಧಗಳನ್ನು ಆಧರಿಸಿ ವ್ಯಕ್ತಿಯು ವಾಯು, ಭೇದಿ,ದುರ್ವಾಸನೆಯಿಂದ ಕೂಡಿದ ಉಸಿರು,ನಿದ್ರೆಯ ಕೊರತೆ, ರಕ್ತಹೀನತೆ,ನಿಶ್ಶಕ್ತಿ,ತೂಕ ಕಳೆದುಕೊಳ್ಳುವಿಕೆ,ಆಗಾಗ್ಗೆ ತಲೆನೋವು, ನಿರಂತರ ಹಸಿವಿನ ಅನುಭವದಂತಹ ಸಮಸ್ಯೆಗಳಿಗೆ ಒಳಗಾಗಬಹುದು.

ಈ ಹೊಟ್ಟೆಹುಳುಗಳ ಬಾಧೆಯಿಂದ ಪಾರಾಗಲು ಕೆಲವು ಸುಲಭ ಮಾರ್ಗಗಳಿಲ್ಲಿವೆ......

► ತೆಂಗು

ಜಂತುಹುಳುಗಳ ನಿವಾರಣೆಗೆ ತೆಂಗು ಅತ್ಯುತ್ತಮ ಮದ್ದಾಗಿದೆ. ಅದು ಪ್ರಬಲ ಪರಾವಲಂಬಿ ನಿರೋಧಕವಾಗಿದ್ದು, ಕಾಯಿ ಮತ್ತು ಎಣ್ಣೆ ಎರಡನ್ನೂ ಚಿಕಿತ್ಸೆಯಲ್ಲಿ ಬಳಸಬಹುದಾಗಿದೆ. ಒಂದು ಚಮಚ ತುರಿದ ತೆಂಗಿನಕಾಯಿಯನ್ನು ಬೆಳಗ್ಗಿನ ತಿಂಡಿಯೊಂದಿಗೆ ಸೇವಿಸಿ,ಮೂರು ಗಂಟೆಗಳ ಬಳಿಕ ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಎರಡು ಚಮಚ ಹರಳೆಣ್ಣೆಯನ್ನು ಬೆರೆಸಿ ಕುಡಿಯಿರಿ. ನೀವು ಪ್ರತಿದಿನ ನಾಲ್ಕು ಚಮಚ ಎಕ್ಟ್ರಾ ವರ್ಜಿನ್ ತೆಂಗಿನೆಣ್ಣೆಯನ್ನೂ ಸೇವಿಸಬಹುದು. ಇದು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

► ಪಪ್ಪಾಯಿ ಕಾಯಿ

ಜಂತುಹುಳಗಳ ನಿವಾರಣೆ ಸೇರಿದಂತೆ ಹಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಆಯುರ್ವೇದ ವೈದ್ಯಪದ್ಧತಿಯಲ್ಲಿ ಪಪ್ಪಾಯಿ ಕಾಯಿಯನ್ನು ಬಳಸಲಾಗುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ಹೊಟ್ಟೆಯಲ್ಲಿನ ಹುಳಗಳನ್ನು ಪರಿಣಾಮಕಾರಿಯಾಗಿ ನಿರ್ಮೂಲನಗೊಳಿಸುತ್ತದೆ. ಒಂದು ಚಮಚ ಪಪ್ಪಾಯಿ ಕಾಯಿ ರಸ ಮತ್ತು ಒಂದು ಚಮಚ ಜೇನನ್ನು ನಾಲ್ಕು ಚಮಚ ಬಿಸಿನೀರಿನೊಂದಿಗೆ ಚೆನ್ನಾಗಿ ಮಿಶ್ರಗೊಳಿಸಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ನೀವು ಪಪ್ಪಾಯಿ ಕಾಯಿ ತುಂಡುಗಳನ್ನು ಒಂದು ಚಮಚ ತೆಂಗಿನೆಣ್ಣೆಯೊಂದಿಗೆ ಕಿವಿಚಿ ಸೇವಿಸಿದರೂ ಹೊಟ್ಟೆಹುಳುಗಳು ನಿವಾರಣೆಯಾಗುತ್ತವೆ.

► ಆ್ಯಪಲ್ ಸಿಡರ್ ವಿನೆಗರ್

 ಇದು ಪರಾವಲಂಬಿ ಜೀವಿಗಳ ದುಷ್ಪರಿಣಾಮಗಳಿಂದ ಏರುಪೇರು ಗೊಂಡ ಹೊಟ್ಟೆಯ ಪಿಎಚ್ ಮಟ್ಟವನ್ನು ಸಹಜಗೊಳಿಸಲು ನೆರವಾಗುತ್ತದೆ ಮತ್ತು ಹುಳಗಳನ್ನು ನಾಶಗೊಳಿಸಿ ನಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಒಂದು ಚಮಚ ಆ್ಯಪಲ್ ಸಿಡರ್ ವಿನೆಗರ್‌ನ್ನು ಒಂದು ಗ್ಲಾಸ್ ಬಿಸಿನೀರಿನಲ್ಲಿ ಸೇರಿಸಿ ಅದಕ್ಕೆ ಸ್ವಲ್ಪ ಜೇನನ್ನು ಬೆರೆಸಿಕೊಂಡು ಪ್ರತಿದಿನ ಸೇವಿಸಿ.

► ಬೆಳ್ಳುಳ್ಳಿ

 ಬೆಳ್ಳುಳ್ಳಿಯಲ್ಲಿರುವ ಗಂಧಕವು ಅಮಿನೊ ಆಮ್ಲಗಳನ್ನು ಹೊಂದಿದ್ದು, ಇವು ಜಂತುಹುಳ ನಿರೋಧಕ ಗುಣಗಳನ್ನು ಹೊಂದಿವೆ. ಅದು ಬ್ಯಾಕ್ಟೀರಿಯಾ ನಿರೋಧಕ,ಬೂಷ್ಟು ನಿರೋಧಕ ಮತ್ತು ನಂಜು ನಿರೋಧಕ ಗುಣಗಳನ್ನೂ ಹೊಂದಿದ್ದು,ಶರೀರದಲ್ಲಿಯ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಮೂರು ಎಸಳುಗಳನ್ನು ತಿನ್ನಿ. ಪರ್ಯಾಯವಾಗಿ ಎರಡು ಎಸಳುಗಳನ್ನು ಚೆನ್ನಾಗಿ ಜಜ್ಜಿ ಅರ್ಧ ಕಪ್ ಹಾಲಿನಲ್ಲಿ ಹಾಕಿ ಕುದಿಸಿ ಖಾಲಿಹೊಟ್ಟೆಯಲ್ಲಿ ಸೇವಿಸಬಹುದಾಗಿದೆ.

► ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳಲ್ಲಿರುವ ಕುಕುರ್ಬಿಟಾಸಿನ್ ಎಂಬ ಸಂಯುಕ್ತವು ಜಂತುಹುಳ ನಿರೋಧಕ ಗುಣಗಳನ್ನು ಹೊಂದಿದೆ. ಎರಡು ಚಮಚ ಬೀಜಗಳನ್ನು ಚೆನ್ನಾಗಿ ಜಜ್ಜಿ ಮೂರು ಕಪ್ ನೀರಿನಲ್ಲಿ ಹಾಕಿ ಕುದಿಸಿ,30 ನಿಮಿಷಗಳ ನಂತರ ಅದನ್ನು ಸೇವಿಸಿ.

► ಕಹಿಬೇವು

ಎಲ್ಲ ವಿಧದ ಜಂತುಹುಳುಗಳ ಬಾಧೆಯಿಂದ ಪಾರಾಗಲು ಬೇವಿನ ಎಲೆ ಅತ್ಯಂತ ಪರಿಣಾಮಕಾರಿ ಮದ್ದಾಗಿದೆ. ಇದು ಜಂತುಹುಳಗಳನ್ನು ಕೊಲ್ಲುವುದು ಮಾತ್ರವಲ್ಲ,ಶರೀರದಲ್ಲಿಯ ನಂಜುಗಳನ್ನೂ ಹೊರಗೆ ಹಾಕುತ್ತದೆ. ಒಂದು ಚಮಚ ಒಣಗಿದ ಬೇವಿನ ಎಲೆಗಳ ಪುಡಿಯನ್ನು ಒಂದು ಗ್ಲಾಸ್ ಬೆಚ್ಚಗಿನ ಹಾಲಿನೊಂದಿಗೆ ಸೇರಿಸಿಕೊಂಡು ಪ್ರತಿದಿನ ಸೇವಿಸಿ.

► ಗಜ್ಜರಿ

ಗಜ್ಜರಿಯಲ್ಲಿ ಸಮೃದ್ಧವಾಗಿರುವ ಬೀಟಾ ಕ್ಯಾರೊಟಿನ್ ಜಂತುಹುಳಗಳ ಮೊಟ್ಟೆಗಳನ್ನು ನಾಶ ಮಾಡುತ್ತದೆ. ಜೊತೆಗೆ ಅದರಲ್ಲಿರುವ ವಿಟಾಮಿನ್ ಸಿ ಮತ್ತು ಸತುವು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ಎರಡು ಗಜ್ಜರಿಗಳನ್ನು ತುರಿದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಜಂತುಹುಳಗಳಿಂದ ಮುಕ್ತಿ ಪಡೆಯಲು ಉತ್ತಮ ವಿಧಾನವಾಗಿದೆ.

► ಹರಳೆಣ್ಣೆ

ಪ್ರಬಲ ವಿರೇಚಕ ಗುಣವನ್ನು ಹೊಂದಿರುವ ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆಯು ಪರಾವಲಂಂಬಿ ಜೀವಿಗಳಿಂದ ಮುಕ್ತಿಯನ್ನು ನೀಡುತ್ತದೆ. ಒಂದು ಚಮಚ ಹರಳೆಣ್ಣೆಯನ್ನು ಒಂದು ಕಪ್ ಬಿಸಿನೀರಿನೊಂದಿಗೆ ಸೇರಿಸಿ ಅದನ್ನು ಒಂದು ವಾರ ಕಾಲ ಸೇವಿಸಿ.

► ಲವಂಗ

ಲವಂಗವು ಜಂತುಹುಳಗಳು,ಅವುಗಳ ಮರಿಗಳು ಮತ್ತು ಮೊಟ್ಟೆಗಳನ್ನು ನಾಶಗೊಳಿಸಲು ನೆರವಾಗುತ್ತದೆ. 2-3 ಲವಂಗಗಳನ್ನು ಒಂದು ಕಪ್ ನೀರಿಗೆ ಸೇರಿಸಿ ಕುದಿಸಿ. ಅದು ತಣ್ಣಗಾದ ಬಳಿಕ ಸ್ವಲ್ಪ ಜೇನು ಸೇರಿಸಿಕೊಂಡು ತಕ್ಷಣ ಕುಡಿಯಿರಿ.

► ಅರಿಷಿಣ

ಪರಾವಲಂಬಿ ಜೀವಿಗಳ ಕಾಟದಿಂದ ಪಾರಾಗಲು ಅರಿಷಿಣ ಇನ್ನೊಂದು ಪರಿಣಾಮಕಾರಿ ಮನೆಮದ್ದಾಗಿದೆ. ಆಂತರಿಕ ನಂಜು ನಿರೋಧಕವಾಗಿ ಕಾರ್ಯಾಚರಿಸುವ ಅದು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು,ಹುಳಗಳನ್ನು ನಿವಾರಿಸಲು ನೆರವಾಗುತ್ತದೆ. ಒಂದು ಚಮಚ ಅರಿಷಿಣದ ರಸವನ್ನು ಒಂದು ಗ್ಲಾಸ್ ಮಜ್ಜಿಗೆಯೊಂದಿಗೆ ಸೇರಿಸಿ ಪ್ರತಿದಿನ ಸೇವಿಸಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X