ಖದೀಜಾ ನುಸ್ರತ್ ಬಿಂತಿ ಫಝಲ್ ಅವರ 'ಕುರ್‌ಆನ್ ಒಂದು ಚಿಂತನೆ' ಕೃತಿ ಬಿಡುಗಡೆ

ಮಂಗಳೂರು, ಜೂ. 2: ಖದೀಜಾ ನುಸ್ರತ್ ಬಿಂತಿ ಫಝಲ್ ಅವರು ಬರೆದಿರುವ ಮತ್ತು ಶಾಂತಿ ಪ್ರಕಾಶನ ಸಂಸ್ಥೆ 252ನೇ ಕೃತಿಯಾಗಿ ಪ್ರಕಟಿಸಿರುವ 'ಕುರ್‌ಆನ್ ಒಂದು ಚಿಂತನೆ' ಎಂಬ ಪುಸ್ತಕ ಶುಕ್ರವಾರ ಜುಮಾ ನಮಾಝಿನ ಬಳಿಕ ಪರ್ಲಿಯದ ರುಖಿಯ್ಯಿ ಮಸೀದಿಯಲ್ಲಿ ಬಿಡುಗಡೆಗೊಂಡಿತು.
ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆಯ ಮಾಜಿ ಅಧ್ಯಕ್ಷ ಮತ್ತು ಪ್ರಾಧ್ಯಾಪಕ ಅಮಾನುಲ್ಲಾ ಖಾನ್ ತರಿಕೇರೆ ಅವರು ಕೃತಿ ಪರಿಚಯ ನಡೆಸಿಕೊಟ್ಟರು. ಕೃತಿಯ ಮೊದಲ ಪ್ರತಿಯನ್ನು ಶೇಖ್ ಹಸನ್ ಹಾಜಿ, ಜಮಾಅತೆ ಇಸ್ಲಾಮೀ ಹಿಂದ್, ಸ್ಥಾನೀಯ ಅಧ್ಯಕ್ಷ ಶಾಹುಲ್ ಹಮೀದ್, ಅಬ್ದುಲ್ಲತೀಫ್ ಆಲಿಯ, ಹಾಫಿಝ್ ಸೈಯದ್ ಫಯಾಝ್ ಮತ್ತು ಉದ್ಯಮಿ ಮತೀಉಲ್ಲಾ ಖಾನ್ ಅವರಿಗೆ ನೀಡಲಾಯಿತು.
Next Story





