ಸಹ್ಯಾದ್ರಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಮಂಗಳೂರು, ಜೂ.2: ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಭಾರತ ಸರಕಾರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾಲೇಜು ಆಫ್ ಫಿಶರೀಸ್ ಮಂಗಳೂರು ಮತ್ತು ದ.ಕ. ಜಿಲ್ಲಾಡಳಿತ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವತಿಯಿಂದ ಪಣಂಬೂರು ಬೀಚ್‌ನಲ್ಲಿ ಜೂ.1ರಂದು ಆರಂಭಿಸಲಾದ ‘ಬೀಚ್ ಕ್ಲೀನಿಂಗ್’ ಕಾರ್ಯಕ್ರಮವನ್ನು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎಂ.ಎಂ ಶಿವಪ್ರಕಾಶ್ ಉದ್ಘಾಟಿಸಿದರು.
ಈ ಸಂದರ್ಭ ಡಾ.ಎಸ್.ಆರ್ ಸೊಮಾಶೇಖರ್, ಡಾ. ಲಕ್ಷ್ಮೀಪತಿ ಎಂ.ಟಿ., ಡಾ. ಮಹೇಶ್ ಕುಮಾರ್, ಡಾ. ದಿನೇಶ್ ಕುಮಾರ್ ವಿ.ಕೆ., ಉತ್ತಪ್ಪಎಸ್, ಯತೀಶ್ ಬೈಕಂಪಾಡಿ,ಡಾ.ಶ್ರೀನಿವಾಸ್ ರಾವ್ ಕುಂಟೆ, ಶ್ರೀಲತಾ ಯು.ಎ., ಡಾ.ಎಸ್. ಮಂಜಪ್ಪ, ಪ್ರೊ. ಸುನೀಲ್ ಕುಮಾರ್, ಪ್ರೊ. ಅನಿಲ್ ಕುಮಾರ್, ಸಂಜೀತ್ ಪಾಲ್ಗೊಂಡಿದ್ದರು.
Next Story





