ತುಮಕೂರು: ಶ್ರೀಗಂಧ ಕಳ್ಳ ಸಾಗಾಟಕರ ಬಂಧನ

ತುಮಕೂರು,ಜೂ.02: ಯಾವುದೇ ಪರವಾನಗಿ ಇಲ್ಲದೆ ಶ್ರೀಗಂಧದ ತುಂಡುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ಅವರ ವಿರುದ್ದ ಕೇಸು ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ 8.15ರ ಸುಮಾರಿಗೆ ಶಿರಾ-ತುಮಕೂರು ರಸ್ತೆಯಲ್ಲಿ ತೆರಳುತಿದ್ದ ಹುಂಡೈ ಐ 10 ಕೆ.ಎ.41 ಎನ್ 8947 ಕಾರನ್ನು ತಡೆದು ತಪಾಸಣೆ ಒಳಪಡಿಸಿದಾಗ ಯಾವುದೇ ಪರವಾನಗಿ ಇಲ್ಲದೆ ಸುಮಾರು 75 ಕೆ.ಜಿ. ತೂಕದ 3.75 ಲಕ್ಷ ಬೆಲೆ ಬಾಳುವ ಗಂಧದ ತುಂಡುಗಳನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿದುದ್ದು ಪತ್ತೆಯಾಗಿದೆ.
ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೈಯದ್ ಬಾಬು ಮತ್ತು ಸೈಯಾದ ರಿಯಾಜ್ ಎಂಬುವವರನ್ನು ಬಂಧಿಸಿ, ಆವರ ವಿರುದ್ದ ಐಪಿಸಿ ಕಲಂ 379 ಮತ್ತು ಅರಣ್ಯ ಕಾಯ್ದೆ 86-87ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಬಂಧಿತರಿಂದ 75 ಕೆ.ಜಿ. ಶ್ರೀಗಂಧದ ತುಂಡು, ಎರಡು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಹುಂಡೈ ಐ 10 ಕಾರನ್ನು ವಶಪಡಿಸಿಕೊಳ್ಳಲಾಗಿದೆ.
Next Story





