ಕೊಡಂಕೂರು ವಿದ್ಯಾಪೀಠಕ್ಕೆ ಶೇ.100 ಫಲಿತಾಂಶ
ಉಡುಪಿ, ಜೂ.2: ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಿಂದ 2017-18 ಸಾಲಿನಲ್ಲಿ ಸಂಸ್ಕೃತ ಕಾವ್ಯ ಪರೀಕ್ಷೆಗೆ 4 ವಿದ್ಯಾರ್ಥಿಗಳು ಹಾಗೂ ಸಂಸ್ಕೃತ ಸಾಹಿತ್ಯ ಪರೀಕ್ಷೆಗೆ 4 ವಿದ್ಯಾರ್ಥಿಗಳು ಬರೆದಿದ್ದು, ಇವರೆಲ್ಲ ಉತೀರ್ಣ ರಾಗುವ ಮೂಲಕ ವಿದ್ಯಾಪೀಠ ಶೇ.100 ಫಲಿತಾಂಶ ದಾಖಲಿಸಿದೆ.
ಸಾಹಿತ್ಯ ಪರೀಕ್ಷೆಯಲ್ಲಿ ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾವ್ಯ ಪರೀಕ್ಷೆಯಲ್ಲಿ ಒಬ್ಬನು ವಿಶಿಷ್ಟ ಶ್ರೇಣಿ ಮತ್ತು ಮೂವರು ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ವಿದ್ಯಾಪೀಠದ ಗೌರವಾ ಧ್ಯಕ್ಷೆ ಶಶಿಕಲಾ ಪ್ರಭಾಕರ ಆಚಾರ್ಯ ಅಭಿನಂದಿಸಿದ್ದಾರೆ.
ವಿದ್ಯಾಪೀಠದ ಪ್ರಥಮ ವರ್ಷಕ್ಕೆ ಸೇರ್ಪಡೆಯ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆತ್ತವರ ಜೊತೆ ವಿದ್ಯಾಪೀಠದ ಪ್ರಾಂಶುಪಾಲರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಬಹುದೆಂದು ವಿದ್ಯಾಪೀಠದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





