ಬೆಂಗಳೂರು: ಜೂ.8ರಿಂದ ಲಾಲ್‌ಬಾಗ್‌ನಲ್ಲಿ ಸಿರಿಧಾನ್ಯ ಮೇಳ
ಬೆಂಗಳೂರು, ಜೂ.2: ಗ್ರಾಮೀಣ ಕುಟುಂಬ ಸಂಸ್ಥೆಯು ಜೂ.8ರಿಂದ ಮೂರು ದಿನಗಳ ಕಾಲ ನಗರದ ಲಾಲ್‌ಬಾಗ್‌ನಲ್ಲಿ ಸಿರಿಧಾನ್ಯಗಳ ಮೇಳ ಆಯೋಜಿಸಿದ್ದು, ಮೇಳದಲ್ಲಿ 100 ಮಳಿಗೆಗಳನ್ನು ತೆರೆಯಲಿದ್ದು, ಸಗಟು ಖರೀದಿದಾರರಿಗೆ ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಚ್.ಶ್ರೀಧರ್‌ಮೂರ್ತಿ ತಿಳಿಸಿದರು.
ನಾನಾ ಸಿರಿಧಾನ್ಯಗಳು ಹಾಗೂ ಮಹಿಳಾ ಸಂಘಗಳು ತಯಾರಿಸಿದ ಪದಾರ್ಥಗಳು ಹೀಗೆ ವಿವಿಧ ಬಗೆಯ ಸಿರಿಧಾನ್ಯ ತಿಂಡಿಗಳು ಮೇಳದಲ್ಲಿ ದೊರೆಯಲಿದೆ. ಇದರ ಜೊತೆಗೆ ಮೇಳದಲ್ಲಿ ಕೈ ಮಗ್ಗ, ಖಾದಿ ವಸ್ತ್ರಗಳು ಹಾಗೂ ಕರಕುಶಲ ಉತ್ಪನ್ನಗಳು ಮಾರಾಟ ನಡೆಯಲಿದೆ.
ಜೂ.8ರಂದು ಬೆಳಗ್ಗೆ 11ಕ್ಕೆ ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದ ಇತರೆ ಭಾಗಗಳ 10ಮಂದಿ ಸರಿಧಾನ್ಯ ಬೆಳೆಯುವ ರೈತರನ್ನು ಸನ್ಮಾನಿಸಲಾಗುವುದು. ಜೂ.9ರಂದು ಮೇಳದಲ್ಲಿ ಜನತೆಗೆ ಹಾಗೂ ರೈತರಿಗೆ ಸಿರಿಧಾನ್ಯ ಬೆಳೆಗಳ ಕುರಿತು ತರಬೇತಿ ನೀಡುವುದು. ಹಾಗೂ ಜೂ.10ರಂದು ಬೆಳಗ್ಗೆ 11ಕ್ಕೆ ಡಾ.ಖಾದರ್ ಅವರೊಂದಿಗೆ ಸಂವಾದ ನಡೆಯಲಿದೆ ಎಂದು ಅವರು ಹೇಳಿದರು.





