ನಿಧನ: ಇಬ್ರಾಹೀಂ ಹಾಜಿ ಮಾದುಮೂಲೆ

ಮಂಗಳೂರು, ಜೂ. 2: ಮುಡಿಪು ಸಮೀಪದ ಅರ್ಕಾಣ ನಿವಾಸಿ ಇಬ್ರಾಹೀಂ ಹಾಜಿ ಮಾದುಮೂಲೆ (69) ಅವರು ಶುಕ್ರವಾರ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು, ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಅಂತ್ಯ ಕ್ರಿಯೆ ಶನಿವಾರ ಬೆಳಗ್ಗೆ ಅರ್ಕಾಣ ಜುಮಾ ಮಸೀದಿಯಲ್ಲಿ ನೆರವೇರಿತು. ಇಬ್ರಾಹೀಂ ಹಾಜಿ ಅವರು ಅರ್ಕಾಣ ಬದ್ರಿಯಾ ಜುಮಾ ಮಸೀದಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Next Story





