ಅಕ್ರಮ ಮರಳು ಸಂಗ್ರಹ: 32 ಲೋಡ್ ವಶಕ್ಕೆ
ಮಂಗಳೂರು, ಜೂ.2: ಬಜಪೆ ಮೂಳೂರು ಗ್ರಾಮದಬೈಲು ಪೇಟೆಯ ಮರಂಕರಿಯ ಎಂಬಲ್ಲಿ ಅಕ್ರಮವಾಗಿ 32 ಲೋಡು ಮರಳನ್ನು ಸಂಗ್ರಹಿಸಿಟ್ಟಿರುವ ಮಾಹಿತಿ ಪಡೆದ ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ.
ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಎಸ್. ಪರಶಿವಮೂರ್ತಿ ನೇತೃತ್ವದಲ್ಲಿ ಈ ದಾಳಿನಡೆದಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಮರಳು ಸಂಗ್ರಸಿಟ್ಟಿದ್ದ ಮರಂಕರಿಯ ಸ್ಥಳಕ್ಕೆ ತೆರಳಿದ್ದರು. ಪರಿಶೀಲನೆ ನಡೆಸಲಾಗಿ ಅದು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಾರಣ 32 ಲೋಡ್ ಮರಳನ್ನು ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿಸಲಾಗಿದೆ.
Next Story





