ಲಾರಿ- ಬೈಕ್ ಢಿಕ್ಕಿ: ಸಹಸವಾರ ಮೃತ್ಯು
ಮಲ್ಪೆ, ಜೂ.2: ಬೈಕೊಂದು ರಸ್ತೆ ಬದಿ ನಿಲ್ಲಿಸಿದ ಲಾರಿಯೊಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸಹಸವಾರರೊಬ್ಬರು ಮೃತಪಟ್ಟ ಘಟನೆ ಜೂ.1 ರಂದು ರಾತ್ರಿ ವೇಳೆ ಗುಜ್ಜರಬೆಟ್ಟು ವೇಬ್ರಿಜ್ ಬಳಿ ನಡೆದಿದೆ.
ಮೃತರನ್ನು ಪಡುತೋನ್ಸೆ ಗುಜ್ಜರಬೆಟ್ಟು ನಿವಾಸಿ ಮುಹಮ್ಮದ್ ನಝೀರ್ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಮೃತರ ಮಗ ನಾಸೀರ್(19) ಎಂಬ ವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ರಾತ್ರಿ ನಮಾಝ್ಗಾಗಿ ಗುಜ್ಜರಬೆಟ್ಟುವಿನಿಂದ ಹೂಡೆ ಮೊಹಿನುದ್ದೀನ್ ಮಸೀದಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಗುಜ್ಜರಬೆಟ್ಟು ವೇಬ್ರಿಜ್ ಬಳಿ ರಸ್ತೆಯ ಮೇಲೆ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನಝೀರ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story