14 ನಿಮಿಷ ಸಂಪರ್ಕ ಕಡಿದುಕೊಂಡ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

ಹೊಸದಿಲ್ಲಿ, ಜೂ.3: ತಿರುವನಂತಪುರಂನಿಂದ ಮಾರಿಷಸ್ ಗೆ ಹೊರಟಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿದ್ದ ವಿಮಾನ 12ರಿಂದ 14 ನಿಮಿಷಗಳ ಕಾಲ ಸಂಪರ್ಕ ಕಡಿದುಕೊಂಡ ಬಗ್ಗೆ ವರದಿಯಾಗಿದೆ.
“ಸಾಗರದ ವಾಯುಪ್ರದೇಶದಲ್ಲಿ ವಿಮಾನ ಸಂಪರ್ಕ ಕಡಿದುಕೊಂಡರೆ ನಾಪತ್ತೆಯಾಗಿದೆ ಎನ್ನುವುದನ್ನು ಘೋಷಿಸಲು ವಾಯುಸಂಚಾರ ನಿಯಂತ್ರಣಾಲಯವು 30 ನಿಮಿಷಗಳ ಕಾಲ ಕಾಯುತ್ತದೆ. ವಿಮಾನ ಐಎಫ್ ಸಿ-31 ವಾಯುಪ್ರದೇಶದಲ್ಲಿ 12 ನಿಮಿಷಗಳ ಕಾಲ ಸಂಪರ್ಕ ಕಡಿದುಕೊಂಡ ನಂತರ ಈ ಬಗ್ಗೆ ಎಚ್ಚರಿಕೆ ರವಾನಿಸಲಾಯಿತು” ಎಂದು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ,.
ಆದರೆ ಈ ಬಗ್ಗೆ ಮಾಹಿತಿಯಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ.
Next Story





