ತಾಯಂದಿರ ದಿನಾಚರಣೆಯ ಅಂಗವಾಗಿ ಮಹಿಳಾ ಕ್ರಿಕೆಟ್ ಪಂದ್ಯ
ಮಂಗಳೂರು, ಜೂ.3: ಮಂಗಳೂರಿನ ಪಾತ್‌ವೇ ಎಂಟರ್‌ಪ್ರೈಸಸ್ ಮತ್ತು ಮರ್ಸಿ ಲೇಡಿಸ್ ಸಲೂನ್ ವತಿಯಿಂದ ತಾಯಂದಿರ ದಿನಾಚರಣೆಯ ಅಂಗವಾಗಿ ಮಹಿಳೆಯರ ಕ್ರಿಕೆಟ್ ಪಂದ್ಯವು ರವಿವಾರ ನಗರದ ಉರ್ವ ಮೈದಾನದಲ್ಲಿ ಜರುಗಿತು.
ಪಂದ್ಯ ಉದ್ಘಾಟಿಸಿ ಮಾತನಾಡಿದ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಿ ವೈಲೆಟ್ ಪಿರೇರಾ ‘ತಾಯಂದಿರ ದಿನದ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ ಈ ಕ್ರೀಡಾಕೂಟ ತಾಯಂದಿರಿಗೆ ಸಲ್ಲಿಸುತ್ತಿರುವ ವಿಶೇಷ ಗೌರವವಾಗಿದೆ. ಸಮಾಜ ಮಹಿಳೆಯರ ಸಾಧನೆಯನ್ನು ನಿಧಾನವಾಗಿ ಗುರುತಿಸುತ್ತದೆ. ಹಾಗಾಗಿ ಸ್ತ್ರೀ ವರ್ಗದ ಪ್ರತಿಭೆಯನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದೆ ಎಂದರು.
ಸಂವೇದನಾ ಸಂಸ್ಥೆಯ ಜಯಲತಾ ಎಸ್.ಅಮೀನ್, ಪ್ರಾಯೋಜಕರಾದ ಮರ್ಸಿ ವೀಣಾ ಡಿಸೋಜ, ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಸಂಜನಾ ಎಸ್. ಚಲವಾದಿ, ಪಾತ್‌ವೇ ಕಾರ್ಯದರ್ಶಿ ಅನಿಶಾ ಅಂಜೆಲಿನಾ, ಮಿಸಸ್ ಇಂಡಿಯಾ ಸಂಘಟಕಿ ಪ್ರತಿಭಾ ಸೌನ್ಶಿಮತ್, ನಟಿ ನೀತಾ ಮುರಳೀಧರ ರಾವ್, ಯಶಿಕಾ, ರೂಪದರ್ಶಿ ಸೌಜನ್ಯಾ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ವಯಸ್ಸಿನ ಮಿತಿಯಿಲ್ಲದೆ ನಡೆದ ಈ ಪಂದ್ಯದಲ್ಲಿ ಪಿಂಕ್ ಪ್ಯಾಂತರ್ಸ್, ವಂಡರ್ ಗರ್ಲ್ಸ್, ಎಂಡಬ್ಲು ವಾರಿಯರ್ಸ್, ರಾಕ್ ಸ್ಟಾರ್ ಮಣಿಪಾಲ, ಮಂಗಳ ಸ್ಪೋರ್ಟ್ಸ್, ಜಸ್ಟ್ ಫಾರ್ ಯು, ಕ್ವೀನ್ಸ್ ಇಲೆವನ್ ಕುಡ್ಲ, ಕುಡ್ಲ ರಾಕರ್ಸ್ ತಂಡಗಳು ಪಾಲ್ಗೊಂಡಿದ್ದವು.







