‘ಸ್ವಚ್ಛ ಮಂಗಳೂರು’ ಅಭಿಯಾನ

ಮಂಗಳೂರು, ಜೂ.3: ರಾಮಕೃಷ್ಣ ಮಿಷನ್ ವತಿಯಿಂದ ‘ಸ್ವಚ್ಛ ಮಂಗಳೂರು ಅಭಿಯಾನ’ದ 34ನೇ ಶ್ರಮದಾನವು ಕೊಡಿಯಾಲಬೈಲ್‌ನಲ್ಲಿ ರವಿವಾರ ನಡೆಯಿತು. ಸಾಹಿತಿ ಡಾ.ಜಿ ಎಸ್ ಮರಿಗುದ್ದಿ ಬೆಳಗಾವಿ, ಸಮಾಜ ಸೇವಕಿ ಶಾರದಾ ಡಿ.ಆರ್. ಶ್ರಮದಾನಕ್ಕೆ ಚಾಲನೆ ನೀಡಿದರು.
ಶ್ರಮದಾನದಲ್ಲಿ ಸ್ವಾಮಿ ಜಿತಕಾಮಾನಂದಜಿ, ಜಾದೂಗಾರ ಕುದ್ರೋಳಿ ಗಣೇಶ್, ಪ್ರವೀಣ ಶೆಟ್ಟಿ, ಶ್ರೀಕಾಂತ ರಾವ್, ಸತ್ಯವತಿ ಶೆಟ್ಟಿ, ಶೀಲಾಮಣಿ ರೈ, ಇಂದಿರಾ, ಪ್ರೊ. ಶೇಷಪ್ಪಅಮೀನ್ ಮತ್ತಿತರರು ಪಾಲ್ಗೊಂಡಿದ್ದರು.
Next Story





