ಕ್ರೈಸ್ತ ಶಿಕ್ಷಣದ ಶಿಕ್ಷಕರಿಗೆ ತರಬೇತಿ ಶಿಬಿರ

ಮಂಗಳೂರು, ಜೂ.3: ಮಂಗಳೂರು ಧರ್ಮ ಪ್ರಾಂತದ ಎಲ್ಲಾ ಚರ್ಚ್‌ಗಳಲ್ಲಿ ಕ್ರೈಸ್ತ ಶಿಕ್ಷಣದ ವರ್ಷ ಪ್ರಾರಂಭೋತ್ಸವವು ಜೂ.10ರಿಂದ ಆರಂಭಗೊಳ್ಳಲಿದ್ದು, ಇದರಲ್ಲಿ ಪಾಲ್ಗೊಳ್ಳುವ ಶಿಕ್ಷಕ ವರ್ಗಕ್ಕೆ ತರಬೇತಿ ನೀಡುವ ಕಾರ್ಯಕ್ರಮವು ರವಿವಾರ ಮಂಗಳಾ ಜ್ಯೋತಿಯಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಮಂಗಳೂರು ಧರ್ಮ ಪ್ರಾಂತದ ಕ್ರೈಸ್ತ ಶಿಕ್ಷಣದ ನಿರ್ದೇಶಕ ಫಾ. ವಿಜಯ್ ಮಚಾದೋ ಪ್ರತೀ ರವಿವಾರ 1ನೆ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ನೀಡಲಾಗುವುದು. ಇದರಲ್ಲಿ ಧರ್ಮ ಭಗಿನಿಯರು, ಚರ್ಚ್ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರ ಸಹಕಾರ ಪಡೆಯಲಾಗುವುದು ಎಂದು ಹೇಳಿದರು.
ಈ ಸಂದರ್ಭ ವಿಲಿಯಂ ಲೋಬೊ ಪಾಲ್ದನೆ, ಚರ್ಚ್‌ನ ಮಾಜಿ ಉಪಾಧ್ಯಕ್ಷೆ ಸಿಸ್ಟರ್ ಸುವರ್ಣ ಉಪಸ್ಥಿತರಿದ್ದರು.
Next Story





