ಮಂಜೇಶ್ವರ: ಸ್ನೇಹಾಲಯಕ್ಕೆ ಸಹಾಯಧನ
ಮಂಗಳೂರು, ಜೂ.3: ಮಂಜೇಶ್ವರ ಸಮೀಪದ ‘ಸ್ನೇಹಾಲಯ’ಕ್ಕೆ ಪಾಲ್ದನೆ ಸಂತ ಥೆರೆಸಾ ಚರ್ಚ್‌ನಲ್ಲಿ ಸಂಗ್ರಹಿಸಲಾದ ಅಕ್ಕಿ, ಬೇಳೆ, ಧವಸ ಧಾನ್ಯ ಹಾಗೂ ಅಡುಗೆಗೆ ಬೇಕಾಗುವ ಸಾಮಗ್ರಿಗಳನ್ನು ಚರ್ಚ್‌ನ ಧರ್ಮಗುರು ಫಾ. ವಿನ್ಸೆಂಟ್ ವಿಕ್ಟರ್ ಮೆನೆಜಸ್ ಸ್ನೇಹಾಲಯದ ಜೋಸೆಫ್ ಅವರಿಗೆ ಹಸ್ತಾಂತರಿಸಿದರು.
2011ರಲ್ಲಿ ಸ್ಥಾಪಿಸಲ್ಪಟ್ಟ ಸ್ನೇಹಾಲಯದಲ್ಲಿ ಬಡ ರೋಗಸ್ಥ ಹಾಗೂ ಸಮಾಜದಿಂದ ತಿರಸ್ಕರಿಸಲ್ಪಟ್ಟ, ಮಾನಸಿಕವಾಗಿ ಅಸ್ವಸ್ಥಗೊಂಡ ಸುಮಾರು 165 ಮಂದಿ ಇದೀಗ ಆಶ್ರಯ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರತೀ ದಿನ ವೆನ್ಲಾಕ್ ಆಸ್ಪತ್ರೆಯ ರೋಗಿಗಳು ಹಾಗೂ ಅವರನ್ನು ಉಪಚರಿಸುವವ 700ರಷ್ಟು ಮಂದಿಗೆ ಮಧ್ಯಾಹ್ನದ ಉಚಿತ ಊಟವನ್ನು ನೀಡಲಾಗುತ್ತದೆ. ಇದಕ್ಕೆ ‘ಮನ್ನಾ’ ಎಂದು ಹೆಸರಿಸಲಾಗಿದೆ ಎಂದು ಜೋಸೆಫ್ ತಿಳಿಸಿದರು.
ಈ ಸಂದರ್ಭ ಧರ್ಮಪ್ರಾಂತದ ಜ್ಯುಡಿಷಿಯಲ್ ವಿಕಾರ್ ಫಾ. ವಾಲ್ಟರ್ ಡಿಮೆಲ್ಲೋ, ಚರ್ಚ್‌ನ ಉಪಾಧ್ಯಕ್ಷ ರೋಶನ್ ಲಸ್ರಾದೊ, ರಿಚರ್ಡ್ ಜೆರಾಲ್ಡ್ ಮಾರ್ಟಿಸ್, ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.
Next Story





