ಮೂಡುಶೆಡ್ಡೆ: ಕಣ್ಣು ತಪಾಸಣಾ ಶಿಬಿರ

ಮಂಗಳೂರು, ಜೂ.3: ಅಂಧರ ಸೇವಾ ಸಂಘದ ವತಿಯಿಂದ ಕರ್ಣಾಟಕ ಬ್ಯಾಂಕ್‌ನ ಸಹಯೋಗದಲ್ಲಿ ಮೂಡುಶೆಡ್ಡೆಯ ಕರ್ಣಾಟಕ ಬ್ಯಾಂಕ್ ಶಾಖೆಯ ಆವರಣದಲ್ಲಿ ರವಿವಾರ 228ನೇ ಕಣ್ಣು ತಪಾಸಣೆ ಉಚಿತ ಶಿಬಿರ ನೆರವೇರಿತು.
ಕರ್ಣಾಟಕ ಬ್ಯಾಂಕ್ ಉಪಮಹಾಪ್ರಬಂಧಕ ರವೀಂದ್ರನಾಥ ಹಂದೆ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂಧರ ಸೇವಾ ಸಂಘ ಉಚಿತ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ. ದೇಶಕ್ಕಾಗಿ ಯುವಜನತೆ ಇಂತಹಾ ಸೇವಾ ಕಾರ್ಯಗಳನ್ನು ಮುಂದುವರೆಸಬೇಕು ಎಂದರು.
ಬ್ಯಾಂಕ್‌ನ ಮಂಗಳೂರು ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ರಮೇಶ್ ಭಟ್ ಮಾತನಾಡಿದರು. ಅಂಧರ ಸೇವಾ ಸಂಘ ಅಧ್ಯಕ್ಷ ಗುರುರಾಜ್ ರಾವ್ ಸ್ವಾಗತಿಸಿದರು. ವೈ. ರವೀಂದ್ರನಾಥ್ ಭಟ್ ವಂದಿಸಿದರು. ಸಂಘದ ಜತೆ ಕಾರ್ಯದರ್ಶಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಎಂ.ವಿ. ಸುಬ್ರಹ್ಮಣ್ಯ, ಸಮಿತಿ ಸದಸ್ಯೆ ಶೋಭಾ ರಾವ್ ಉಪಸ್ಥಿತರಿದ್ದರು.
Next Story





