ಪಕ್ಷದ ವಿರುದ್ಧವೇ ಪ್ರತಿಭಟನೆ : ಉ.ಪ್ರದೇಶದ ಬಿಜೆಪಿ ಸಂಸದ, ಶಾಸಕನ ಘೋಷಣೆ

ಲಕ್ನೊ, ಜೂ.3: ಉತ್ತರಪ್ರದೇಶದ ಬಿಜೆಪಿ ಸಂಸದ ಹಾಗೂ ಶಾಸಕರು ಪಕ್ಷದ ವಿರುದ್ಧವೇ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಬೆಲ್ಥೆರ ರಸ್ತೆ ಹಾಗೂ ಸಲೇಮ್‌ಪುರದಲ್ಲಿ ರೈಲಿಗೆ ನಿಲುಗಡೆ ಒದಗಿಸಬೇಕೆಂದು ಒತ್ತಾಯಿಸಿ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಧರಣಿ ನಡೆಸುವುದಾಗಿ ಸಲೇಮ್‌ಪುರ ಕೇತ್ರದ ಬಿಜೆಪಿ ಸಂಸದ ರವೀಂದ್ರ ಕುಶ್ವಾಹ ತಿಳಿಸಿದ್ದಾರೆ. ಈ ಸ್ಥಳಗಳಲ್ಲಿ ರೈಲಿಗೆ ನಿಲುಗಡೆ ಒದಗಿಸಬೇಕೆಂದು ಜನತೆ ಒತ್ತಾಯಿಸುತ್ತಿದ್ದು ಈ ಬಗ್ಗೆ ರೈಲ್ವೇ ಸಚಿವರಿಗೆ ಎಂಟು ಪತ್ರ ಬರೆದಿದ್ದೇನೆ. ಆದರೆ ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕುಶ್ವಾಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಬೈರಿಯಾ ತಹಶೀಲ್ದಾರರ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪವಿದೆ. ಇದನ್ನು ಖಂಡಿಸಿ ಜೂನ್ 5ರಂದು ತಹಶೀಲ್ದಾರರ ಕಚೇರಿ ಎದುರು ಧರಣಿ ಮುಷ್ಕರ ನಡೆಸುವುದಾಗಿ ಉತ್ತರಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಘೋಷಿಸಿದ್ದಾರೆ.
Next Story





