ಬೆಂಗಳೂರು: ವಿಶ್ವ ತಂಬಾಕು ಮುಕ್ತ ದಿನಾಚರಣೆ

ಬೆಂಗಳೂರು, ಜೂ.3: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ, ಬೆಂಗಳೂರು ಭಾರತೀಯ ರೈಲ್ವೆ ಹಾಗೂ ಕಿದ್ವಾಯಿ ಮೆಮೊರಿಯಲ್ ಆಸ್ಪತ್ರೆ ಸಹಯೋಗದಲ್ಲಿ ‘ವಿಶ್ವ ತಂಬಾಕು ಮುಕ್ತ ದಿನಾಚರಣೆ’ ಆಚರಿಸಲಾಯಿತು.
ನಗರದ ಕ್ರಾಂತೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಂಬಾಕಿನ ಸೇವನೆಯಿಂದ ದುಷ್ಪರಿಣಾಮಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಸಾರಥಿ ಜಲಕ್ ತಂಡದಿಂದ ‘ಧೂಮಾರಾಧನೆ’ ಎಂಬ ಬೀದಿ ನಾಟಕ ಪ್ರದರ್ಶಿಸಿ, ತಂಬಾಕಿನ ಉತ್ಪನ್ನಗಳು ಮನುಷ್ಯನ ಆರೋಗ್ಯವನ್ನು ಹೇಗೆ ಇಂಚಿಚಾಗಿ ನಾಶಮಾಡುತ್ತವೆ ಎಂಬುದನ್ನು ನಾಟಕದ ಪಾತ್ರಗಳ ಮೂಲಕ ಅಭಿನಯಿಸಿ ತೋರಿಸಿದರು. ದೇಹದ ಆರೋಗ್ಯ ಕಾಪಾಡಿಕೊಂಡು ಕುಟುಂಬದ ಜೊತೆ ಆರೋಗ್ಯಕರ ಜೀವನ ನಡೆಸಲು ತಂಬಾಕಿನಿಂದ ದೂರವಿರಿ ಎಂಬ ಸಂದೇಶ ನೀಡಲಾಯಿತು.
ಜಾದುಗಾರ ನಾಗೇಂದ್ರ ಪ್ರಸಾದ್ ತಮ್ಮ ಜಾದೂ ಮೂಲಕ ದುಷ್ಪರಿಣಾಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಪಿಆರ್‌ಸಿಐ ರಾಷ್ಟ್ರೀಯ ಮುಖ್ಯಸ್ಥ ಎಂ. ಬಿ. ಜಯರಾಮ್, ರೈಲ್ವೆ ನಿಲ್ದಾಣದ ನಿರ್ದೇಶಕ ಸಂತೋಷ್‌ಹೆಗ್ಡೆ , ಭಾರತೀಯ ರೈಲ್ವೆ ಕಮರ್ಶಿಯಲ್ ವ್ಯವಸ್ಥಾಪಕ ಬಿಸ್ವಾಸ್, ರಾಷ್ಟ್ರೀಯ ಮುಖ್ಯಸ್ಥೆ ಗೀತಾಶಂಕರ್, ಕೆಎಸ್ಸಾರ್ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, ಎಫ್‌ಕೆಸಿಸಿಐ ಪ್ರಕಾಶ್, ಪಿಆರ್‌ಸಿಐ ಕಾರ್ಯದರ್ಶಿ ಶ್ರೀನಿವಾಸ್‌ನಾಯ್ಡು ಹಾಜರಿದ್ದರು.







