ಬೆಂಗಳೂರು: ಪೊಲೀಸ್ ಠಾಣೆ ಎದುರೇ ಯುವಕರಿಂದ ಬೈಕ್ ವೀಲಿಂಗ್
ಬೆಂಗಳೂರು, ಜೂ.3: ಮೂರು ಬೈಕ್‌ಗಳಲ್ಲಿ ಬಂದ ಐದು ಮಂದಿ ಯುವಕರ ಗುಂಪು ಪೊಲೀಸ್ ಠಾಣೆ ಮುಂದೆಯೇ ವೀಲಿಂಗ್ ಮಾಡಿರುವ ಘಟನೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ.
ಕನ್ನಿಂಗ್‌ಹ್ಯಾಮ್ ರಸ್ತೆಯ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಎದುರು ರವಿವಾರ ಬೆಳಗ್ಗೆ 7ಗಂಟೆ ಸುಮಾರಿಗೆ ವೀಲಿಂಗ್ ಮಾಡಿರುವ ಯುವಕರ ಗುಂಪು ಅಲ್ಲಿಂದ ಪರಾರಿಯಾಗಿದ್ದಾರೆ.
ಯುವಕರು ಬೈಕ್ ವೀಲಿಂಗ್ ಮಾಡಿರುವ ದೃಶ್ಯಾವಳಿಗಳನ್ನು ಹತ್ತಿರದ ಸಿಸಿ ಕ್ಯಾಮಾರಗಳಲ್ಲಿ ಪರಿಶೀಲಿಸುತ್ತಿರುವ ಪೊಲೀಸರು, ಯುವಕರ ಪತ್ತೆಗೆ ಶೋಧ ನಡೆಸಿದ್ದಾರೆ.
Next Story





