ಹನೂರು: ಆಡಿನ ಮೇಲೆ ಚಿರತೆ ದಾಳಿ
ಹನೂರು,ಜೂ.03: ಹನೂರು ಸಮೀಪದ ಮಹಾಲಿಂಗನಕಟ್ಟೆ ಗ್ರಾಮದ ತಟ್ಟೆಹಳ್ಳದ ಸೇತುವೆ ಸಮೀಪ ಸೂರಿ ಚಿಕ್ಕಮಾದು ಎಂಬುವವರ ಜಮೀನಿನ ಶೆಡ್‍ನಲ್ಲಿ ಕಟ್ಟಿ ಹಾಕಿದ್ದ ಆಡಿನ ಮರಿಯನ್ನು ಚಿರತೆ ತಿಂದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಚಿರತೆಯು ಸೂರಿ ಚಿಕ್ಕಮಾದು ಎಂಬುವವರಿಗೆ ಸೇರಿದ್ದ ಆಡಿನ ಮರಿಯನ್ನು ಮಹಾಲಿಂಗನಕಟ್ಟೆಯಿಂದ ಚಿಕ್ಕಮಾಲಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಸಮೀಪಕ್ಕೆ ಎಳೆದುಕೊಂಡು ಹೋಗಿ ಕೊಂದು ಹಾಕಿದೆ. ನಂತರ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯ ಹೆಜ್ಜೆ ಗುರುತನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ
Next Story





