ಅನ್ವರ್ ಮಾಣಿಪ್ಪಾಡಿಗೆ ಮಾತೃ ವಿಯೋಗ
ಮಂಗಳೂರು, ಜೂ. 3: ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ತಾಯಿ ಜೈಬುನ್ನೀಸಾ ಮಾಣಿಪ್ಪಾಡಿ (92) ರವಿವಾರ ನಿಧನರಾದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ.
ಜೈಬುನ್ನೀಸಾ ಅವರ ಪತಿ, ಮೂಲತಃ ಕಾಸರಗೋಡಿನ ಪೈವಳಿಕೆ ಬಳಿಯ ಮಾಣಿಪ್ಪಾಡಿಯವರಾದ ಎಂ.ಎಸ್. ಮಾಣಿಪ್ಪಾಡಿ ಅವರು ಹಿರಿಯ ಪೊಲೀಸ್ ಅಧಿಕಾರಿ (ಪೊಲೀಸ್ ಸೂಪರಿಂಟೆಂಡೆಂಟ್)ಯಾಗಿ ದ.ಕ. ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು.
ಅವರ ಕಿರಿಯ ಪುತ್ರ ಅನ್ವರ್ ಮಾಣಿಪ್ಪಾಡಿಯಾದರೆ ಹಿರಿಯ ಪುತ್ರ ಡಾ. ಅಝರ್ ಮಾಣಿಪ್ಪಾಡಿ ಅಮೆರಿಕದಲ್ಲಿ ವೈದ್ಯರಾಗಿದ್ದು, ಕಿರಿಯ ಪುತ್ರಿ ಕೂಡಾ ಅಮೆರಿಕದಲ್ಲಿ ಕಂಪೆನಿಯೊಂದರ ಸಿಇಒ ಆಗಿದ್ದಾರೆ. ಹಿರಿಯ ಪುತ್ರಿ ದಿಲ್ಲಿಯಲ್ಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಪೈವಳಿಕೆ ಬಳಿಯ ಕೊಡಿಯಡ್ಕ ಮಸೀದಿಯಲ್ಲಿ ನಡೆಯಲಿದೆ.
Next Story





