ನಾಚುರೋಪತಿ ಉಚಿತ ಯೋಗ ಶಿಬಿರ

ಪಡುಬಿದ್ರೆ, ಜೂ. 3: ರೋಟರಿ ಕ್ಲಬ್ ಉಚ್ಚಿಲ ಮತ್ತು ಆಳ್ವಾಸ್ ನಾಚುರೋಪತಿ ಕಾಲೇಜ್ ಮೂಡಬಿದ್ರಿ ಇವರ ಸಹಯೋಗದಲ್ಲಿ ವಿಶ್ವ ಯೋಗದಿನಾಚರಣೆ ಪ್ರಯುಕ್ತ ಉಚಿತ ಯೋಗ ಶಿಬಿರ ಸಪ್ತಾಹವನ್ನು ಉಚ್ಚಿಲ ರಾಧಾ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸ್ಥಳೀಯ ಯೋಗ ಶಿಕ್ಷಕಿ ಶಾಮಲಾ ಎನ್.ರಾವ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನಮ್ಮ ದೈನಂದಿನ ಕೆಲಸ ಕಾರ್ಯಗಳು ನಿರಾಯಾಸವಾಗಿಸುವಲ್ಲಿ ಹಾಗೂ ಸ್ಪೂರ್ತಿದಾಯಕವಾಗಿರಲು ಯೋಗವು ಉಪಯುಕ್ತವಗಿದೆ. ಈ ನಿಟ್ಟಿನಲ್ಲಿ ಹಿರಿಯರು ಪ್ರತಿನಿತ್ಯ ಯೋಗಾಭ್ಯಾಸ ಚಟುವಟಿಕೆಗಳನ್ನು ಮಾಡುವ ಮೂಲಕ ಮಕ್ಕಳು ಆಸಕ್ತರಾಗಿ ಆರೋಗ್ಯಕರ ವಾತಾವರಣವಾಗಲು ಸಾಧ್ಯ ಎಂದರು.
ಉಚ್ಚಿಲ ರೋಟರಿ ಅಧ್ಯಕ್ಷ ಹರೀಷ ಕೆ.ಶೆಟ್ಟಿ ಪೊಲ್ಯ, ಕಾರ್ಯದರ್ಶಿ ವಾದಿರಾಜ ರಾವ್ ನಡಿಮನೆ, ಜಿ.ಎಸ್.ಆರ್ ಗಣೇಶ ಆಚಾರ್ಯ, ಸದಸ್ಯರು ಭಾಗವಹಿಸಿದ್ದರು. ಮೂಡಬಿದ್ರಿ ಆಳ್ವಾಸ್ ನಾಚುರೋಪತಿ ಕಾಲೇಜ್ ವಿದ್ಯಾರ್ಥಿನಿಯರಾದ ಭಾವನಾ, ಗ್ರೀಷ್ಮಾ ಗೌಡ, ಶ್ರೀಜ ಶೆಟ್ಟಿ ಯೋಗ ತರಬೇತಿ ನೀಡಿದರು.
Next Story





