ಮೈಸೂರು: ವಿಶ್ವ ಯೋಗ ದಿನದ ಅಂಗವಾಗಿ ಅರಮನೆ ಆವರಣದಲ್ಲಿ ಯೋಗಭ್ಯಾಸ

ಮೈಸೂರ,ಜೂ.3: ಇದೇ ತಿಂಗಳ 21 ರಂದು ನಡೆಯುವ ವಿಶ್ವ ಯೋಗ ದಿನ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೂರ್ವ ತಯಾರಿ ನಡೆಯುತ್ತಿದ್ದು, ರವಿವಾರ ಮುಂಜಾನೆ ಯೋಗಪಟು ಗಳು ಅರಮನೆಯ ಮುಂಭಾಗ ಯೋಗಾಭ್ಯಾಸ ನಡೆಸಿದರು.
ಇಂದು ಮುಂಜಾನೆ 5.30 ರಿಂದಲೇ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿ ಯೋಗ ಮಾಡಿದರು. ಕಳೆದ ವರ್ಷ ವಿಶ್ವಯೋಗ ದಿನದಂದು ಮೈಸೂರಿನಲ್ಲಿ 55 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಯೋಗ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು. ಅಂದಿನ ವಿಶ್ವ ಯೋಗ ದಿನದಂದು ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಾರೆ ಎನ್ನಲಾಗಿತ್ತು. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಜೂನ್ 21ರ ವಿಶ್ವ ಯೋಗ ದಿನ ಯೋಗ ಪ್ರದರ್ಶಿಸಿ ದಾಖಲೆ ನಿರ್ಮಿಸಲು ಮಲ್ಲಿಗೆ ನಗರಿ ಮೈಸೂರು ಸಜ್ಜಾಗುತ್ತಿದ್ದು. ಇಂದು ಮುಂಜಾನೆ ಯೋಗ ಪಟು ಗಳು ಅರಮನೆಯ ಮುಂಭಾಗ ಯೋಗಾಭ್ಯಾಸ ನಡೆಸಿದರು.
Next Story





