ಮೈಸೂರು ರಾಜವಂಶಸ್ಥರ ಪೈಲ್ವಾನ್ ಕೃಷ್ಣಾಜೆಟ್ಟಪ್ಪ ನಿಧನ

ಮೈಸೂರು,ಜೂ.3: ಮೈಸೂರು ಸಂಸ್ಥಾನದ ಹಿರಿಯ ಉಸ್ತಾದ್ ಕೃಷ್ಣಾಜೆಟ್ಟಪ್ಪ (94) ಮೈಸೂರಿನ ರಾಘವೇಂದ್ರ ನಗರದ ಮನೆಯಲ್ಲಿ ನಿಧನರಾಗಿದ್ದಾರೆ.
ಮೈಸೂರಿನ ಹಿರಿಯ ಉಸ್ತಾದ್ ಕೃಷ್ಣಾಜೆಟ್ಟಪ್ಪ ಅರಮನೆಯ ಪ್ರಖ್ಯಾತ ದಸರಾ ವಜ್ರಮುಷ್ಠಿ ಕಾಳಗಕ್ಕೆ ಮಾರ್ಗದರ್ಶಕರಾಗಿದ್ದರು. ಮೈಸೂರು ರಾಜವಂಶಸ್ಥರ ನಿಷ್ಠಾವಂತ ಪೈಲ್ವಾನ್ ಹಾಗೂ ಮೂಳೆ ತಜ್ಞರಾಗಿದ್ದರು. ಮೃತ ಕೃಷ್ಣಾಜೆಟ್ಟಪ್ಪ ಪತ್ನಿ ಹಾಗೂ ಹತ್ತು ಜನ ಮಕ್ಕಳನ್ನು ಅಗಲಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ನೂರಾರು ಪೈಲ್ವಾನರ ವಜ್ರ ಮುಷ್ಠಿಕಾಳಗ ಮಾಡಿದ್ದರು. ಮೃತರ ಅಂತ್ಯಕ್ರಿಯ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ರವಿವಾರ ಮಧ್ಯಾಹ್ನ ನೆರವೇರಿತು.
Next Story





