ಕಾಸರಗೋಡು: ಬಸ್ ಢಿಕ್ಕಿ; ಇಬ್ಬರು ಬೈಕ್ ಸವಾರರು ಮೃತ್ಯು

ಕಾಸರಗೋಡು, ಜೂ.3: ಸರಕಾರಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕಾಞಂಗಾಡಿನ ಮೇಲೋತ್ ಎಂಬಲ್ಲಿ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ನಡೆದಿದೆ.
ಮೃತಪಟ್ಟವರನ್ನು ರಾವಣೇಶ್ವರದ ಸುರೇಶ್ (40) ಹಾಗೂ ಮಟ್ಟು ಬೈಜು (28) ಎಂದು ಗುರುತಿಸಲಾಗಿದೆ.
ಅವರಿಬ್ಬರು ಸಂಚರಿಸುತ್ತಿದ್ದ ಬೈಕ್‌ಗೆ ಕಾಞಂಗಾಡ್‌ನಿಂದ ಕಟ್ಟಪ್ಪನಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಸೂಪರ್ ಫಾಸ್ಟ್ ಬಸ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರರಾದ ಸುರೇಶ್ ಮತ್ತು ಮಟ್ಟು ಬೈಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ನೀಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





