14 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ: 30 ದಿನಗಳಲ್ಲಿ ಮರಣ ದಂಡನೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ

ಸಂಬಾಲ್ಪುರ, ಜೂ. 3: ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅಪರಾಧಿಗಳಿಗೆ ಒರಿಸ್ಸಾದ ತ್ವರಿತ ನ್ಯಾಯಾಲಯ ಶನಿವಾರ ಸಂಜೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರನೇ ಅಪರಾಧಿ ಬಾಲಕನಾಗಿರುವುದರಿಂದ ರಿಮಾಂಡ್ ಹೋಮ್‌ಗೆ ಕಳುಹಿಸಲು ಸೂಚಿಸಿದೆ.
ಈ ಪ್ರಕರಣ ವಿಚಾರಣೆಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಂತೋಷ್ ಪಾಂಡಾ 14 ಗಂಟೆಗಳ ಕಾಲ ನಡೆಸಿದ್ದಾರೆ. ಕೇವಲ 30 ದಿನಗಳಲ್ಲಿ ತೀರ್ಪು ನೀಡುವ ಮೂಲಕ ನ್ಯಾಯಾಲಯ ದಾಖಲೆ ಬರೆದಿದೆ. ಇದಲ್ಲದೆ ಪ್ರತಿ ಆರೋಪಿಗೆ 50 ಸಾವಿರ ರೂ. ದಂಡ ವಿಧಿಸಿದೆ. ಅಪ್ಝಲ್ ರಾಜಾ, ಟಿನು ಸಾಹು, ಹಾಡು ಪಂಚಬಿಹಾರ್, ಅಶೀರ್ವಾದ್ ಬೆಹೆರಾ, ಅಭಿಲಾಶ್ ಪಂಚಬಿಹಾರ್ ಹಾಗೂ ಬಾಲಕನನ್ನು ನ್ಯಾಯಾಲಯ ಪೊಕ್ಸೊ ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಪರಿಗಣಿಸಿದೆ.
ಜಿಲ್ಲೆಯ ಸಸಾನ್ ಪಟ್ಟಣದಿಂದ 14 ವರ್ಷದ ಬಾಲಕಿಯನ್ನು ಮೇ 2ರಂದು ಅಪಹರಿಸಿದ ಬಾಲಕ ಸೇರಿದಂತೆ 6 ಮಂದಿ ಇದ್ದ ತಂಡ ಸಾಮೂಹಿಕವಾಗಿ ಅತ್ಯಾಚಾರ ಎಸಗಿತ್ತು. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಳು.
Next Story





