ಮಾರಿಷಸ್‌ನ 32 ವರ್ಷ ಹಳೆಯ ಹಡಗು ದುರಸ್ತಿಗೊಳಿಸಿದ ಭಾರತೀಯ ನೌಕಾಪಡೆ

ಮುಂಬೈ, ಜೂ.3: ಮಾರಿಷಸ್ ಕೋಸ್ಟ್‌ಗಾರ್ಡ್‌ಗೆ ಸೇರಿದ 32 ವರ್ಷ ಹಳೆಯ ಹಡಗಿನ ದುರಸ್ತಿ ಕಾರ್ಯವನ್ನು ಭಾರತೀಯ ನೌಕಾಪಡೆ ಪೂರ್ಣಗೊಳಿಸಿದೆ.
ಭಾರತೀಯ ನೌಕಾಪಡೆಯ ರಾಜತಾಂತ್ರಿಕ ಸ್ನೇಹವೃದ್ಧಿ ಕ್ರಮದಡಿ ಮಾರಿಷಸ್ ಕೋಸ್ಟ್‌ಗಾರ್ಡ್‌ನ ‘ಗಾರ್ಡಿಯನ್’ ಎಂಬ ಹಡಗಿನ ಸೇವಾವಧಿ ವಿಸ್ತರಣೆಯ ದುರಸ್ತಿ ಕಾರ್ಯವನ್ನು 2017ರ ಡಿ.1ರಂದು ನೌಕಾಪಡೆಯ ಡಾಕ್‌ಯಾರ್ಡ್‌ನಲ್ಲಿ ಆರಂಭಿಸಲಾಗಿದ್ದು, 6 ತಿಂಗಳ ಕಾರ್ಯದಲ್ಲಿ ಹಡಗಿನ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಮತ್ತು ಆಯುಧಕೋಶದ ಸಂಪೂರ್ಣ ದುರಸ್ತಿ ನಡೆಸಲಾಗಿದೆ. ಅಗತ್ಯವಿರುವ ಪರೀಕ್ಷಾ ಪ್ರಯೋಗದ ಬಳಿಕ ಹಡಗು ಮಾರಿಷಸ್‌ನತ್ತ ಸಂಚಾರ ಆರಂಭಿಸಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.
Next Story





