ಬಂಟ್ವಾಳ: ಯುವಕನ ಚಿಕಿತ್ಸೆಗೆ ಸಹಾಯಕ್ಕಾಗಿ ಮನವಿ

ಬಂಟ್ವಾಳ, ಜೂ. 4: ಬಂಟ್ವಾಳದ ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ನಿವಾಸಿ 26 ವರ್ಷದ ಫಾರೂಕ್ ಅವರು ಅಪಘಾತದಲ್ಲಿ ತನ್ನ ಎರಡೂ ಕಾಲಿನ ಬಲವನ್ನು ಕಳೆದುಕೊಂಡು ಅಂಗವಿಕಲರಾಗಿದ್ದು, ದಾನಿಗಳಿಂದ ಚಿಕಿತ್ಸೆ ನೆರವನ್ನು ಕೋರಲಾಗಿದೆ.
ಇಲ್ಲಿನ ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ನಿವಾಸಿಯಾಗಿರುವ ಮೆಹಬೂಬ್ (ಸಾಯಿಬಾಕ) ಅವರ ಮೂವರು ಮಕ್ಕಳಲ್ಲಿ ಪಾರೂಕ್ ಕಿರಿಯವ. ಮೆಹಬೂಬ್ ಅವರು ಮಂಚಿಯಲ್ಲಿ ಹಳೆ ಸೈಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇದರಿಂದ ಬಂದ ವರಮಾನದರಿಂದ ಜೀವನ ಸಾಗಿಸುತ್ತಿದ್ದಾರೆ.
ಹಿರಿಯ ಮಗ ಪಕ್ಕದ ಪೇಟೆಯಲ್ಲಿ ದುಡಿಯುತ್ತಿದ್ದು, ಹೆಣ್ಣು ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಫಾರೂಕ್ ಅವರು ಮನೆಯ ಬಡತನದಿಂದ ಶಾಲೆಯನ್ನು ಮೊಟಕುಗೊಳಿಸಿ ರಿಕ್ಷಾವೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದರು. ಕುಕ್ಕಾಜೆಯ ತನ್ನ ಮನೆಯಿಂದ ಎಂದಿನಂತೆ ತನ್ನ ಕುಟುಂಬ ನಿರ್ವಹಣೆಗೆ ದುಡಿಯಲು ಹೋದಾಗ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದು, ತನ್ನ ಎರಡೂ ಕಾಲಿನ ಬಲವನ್ನು ಕಳೆದು ಹಾಸಿಗೆ ಹಿಡಿದ ಫಾರೂಕ್, ಘಟನೆ ನಡೆದು ಇಂದಿಗೆ ವರ್ಷ ಮೂರು ಕಳೆದರೂ ಯಾವುದೇ ಚಿಕಿತ್ಸೆ ಫಲಾಕಾರಿಯಾಗಲಿಲ್ಲ. ಈಗ ಫಾರೂಖ್‌ಗೆ ವೀಲ್ ಚೆಯರ್ ಸಂಗಾತಿ. ಅದರ ಸಹಾಯವಿಲ್ಲದೆ ಏನೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕರಿದ ಕಗ್ಗತ್ತಲೆಯಲ್ಲಿ ಈತ ತನ್ನ ವ್ಯಕ್ತಿತ್ವವನ್ನು ಹುಡುಕುವಂತಾಗಿದೆ.
ರಿಕ್ಷಾ ಅಪಘಾತದಲ್ಲಿ ದೇಹದ ಸಂಪೂರ್ಣ ಬಲವನ್ನು ಕಳೆದುಕೊಂಡಿದ್ದಾರೆ. ಎರಡು ಕೈಗಳು ಅಲುಗಾಡುವುದು ಬಿಟ್ಟರೆ ದೇಹದ ಉಳಿದ ಭಾಗಕ್ಕೆ ಎಂಥ ಗಾಯವಾದರೂ ಗೊತ್ತಾಗುವುದಿಲ್ಲ. ಎಲ್ಲ ರೀತಿಯ ಶಸ್ತ್ರಚಿಕಿತ್ಸೆ ನಡೆಸಿದರೂ ಯಾವುದೂ ಫಲಾಕಾರಿಯಾಗಲಿಲ್ಲ. ದುಡಿಯುವ ಕೈಗಳು ವೀಲ್ ಚೆಯರ್‌ನಲ್ಲಿ ಕಳೆಯುವಂತಾಗಿದೆ. ಬಡತನದಿಂದ ಇರುವ ಈ ಕುಟುಂಬಕ್ಕೆ ನಿರ್ವಹಣೆಗೂ ಕಷ್ಟವಾಗಿದೆ.
ಅಲ್ಲದೆ, ತಿಂಗಳಿಗೆ ಸುಮಾರು 5 ಸಾವಿರ ರೂ. ಚಿಕಿತ್ಸೆ ವೆಚ್ಚಕ್ಕೆ ತಗಲುತ್ತದೆ. ವಾರಕ್ಕೊಮ್ಮೆ ಯೂರಿನ್ ಪೈಪ್ ಬದಲಾಯಿಸಬೇಕು. ಇದನ್ನು ಇಲ್ಲಿನ ಹತ್ತಿರ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದ್ದು, ಇದಕ್ಕಾಗಿಯೇ 1500 ರೂ. ಬೇರೆಯೇ ನೀಡಬೇಕು ಎಂದು ಹೇಳುತ್ತಾರೆ ಫಾರೂಕ್ ಅವರು. ಈಗ ನಿಮ್ಮ ಸಹಾಯದ ಅಗತ್ಯವಿದ್ದು, ಚಿಕಿತ್ಸೆಗಾಗಿ ನೆರವನ್ನು ಕೋರಲಾಗಿದೆ.
ಸಹಾಯ ಮಾಡಲು ಇಚ್ಛಿಸುವವರು.
ಮೊಬೈಲ್ ನಂಬರ್: +91 8105682852 ( ಫಾರೂಕ್)
Account holder Name : Mahammad Farooq
Bank Name: Karnataka Bank Limited
Branch: Manchi
Account Number : 4652500101788901
IFS Code: KARB0000465







