ರಾಷ್ಟ್ರ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನ ಪ್ರತಿಭೆಗಳು

ಮಡಿಕೇರಿ,ಜೂ.3 : ಗೋವಾ ರಾಜ್ಯದ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‍ಶಿಪ್ ಜೂ. 8 ರಿಂದ 10ರ ವರೆಗೆ ನಡೆಯಲಿದ್ದು, ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ಪೂಜಾರಿರ ಬೃಹತ್ ಬೋಪಯ್ಯ, ಚಕ್ಕೇರ ಕಾರ್ಯಪ್ಪ ಪ್ರಮೋದ್, ಕಾರ್ತಿಕ್ ನಾಯಕ, ಸಿ.ಎಸ್.ಮೌರ್ಯ, ಮಿನ್ನಂಡ ಡಿ.ಯಗಸ್ಸ್, ಪ್ರೀತಮ್ ಎಮ್. ಪದ್ಮನಾಭ, ದೃತಿ ಹೃಷಿಕಾ ಬಿ. ಶಂಕರ್, ಬೈಲೆರಾ ಪ್ರೊನಿಕ್ಷಾ ವಿಶ್ವನಾಥ್, ತಾನಿಯಾ ಭವಾನಿ ಶಂಕರ್ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರರಾದ ಬಿ.ಜಿ. ಲೋಕೇಶ್ ರೈ, ವಾಸ್ಕೊ ಟೆಕ್ವಾಂಡೊ ಅಕಾಡಮಿ, ಟೆಕ್ವಾಂಡೊ ಫೆಡರೇಶನ್ ಆಫ್ ಇಂಡಿಯಾ ಹಾಗೂ ಗೋವಾ ಟೆಕ್ವಾಂಡೊ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‍ಶಿಪ್ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
Next Story





