ಮಂಗಳೂರು: ನೇಣುಬಿಗಿದು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ
ಮಂಗಳೂರು, ಜೂ. 5: ನಗರದ ಹೊರವಲಯದ ವಾಮಂಜೂರು ತಿರುವೈಲ್‌ನಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬರು ತನ್ನ ಮನೆಯ ಪಕ್ಕಾಸಿಗೆ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ತಿರುವೈಲ್ ಅಮೃತನಗರ ನಿವಾಸಿ ಶಂಕರ್ ಕಾಮತ್ (51) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗ್ಗೆ ಸುಮಾರು 9ಗಂಟೆ ಶಂಕರ್ ಅವರ ಪತ್ನಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಶಂಕರ್ ಅವರು ನಗರದ ಬ್ಯಾಂಕೊಂದರಲ್ಲಿ ಕ್ಲಾರ್ಕ್ ಆಗಿದ್ದು, ಸಾಲವನ್ನು ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಇದೇ ಒತ್ತಡದಲ್ಲಿ ಅವರು ಆತ್ಮಹತ್ಯೆ ಮಾಡಿ ಕೊಂಡಿರಬೇಕೆಂದು ಶಂಕಿಸಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





