‘ಎ’ ಗುಂಪಿನಲ್ಲಿ ಉರುಗ್ವೆ ಫೇವರಿಟ್
ಫಿಫಾ ವಿಶ್ವಕಪ್

ಮಾಸ್ಕೊ, ಜೂ.5: ಎರಡು ಬಾರಿಯ ಚಾಂಪಿಯನ್ ಉರುಗ್ವೆ ‘ಎ’ ಗುಂಪಿನಲ್ಲಿರುವ ನಾಲ್ಕು ತಂಡಗಳ ಪೈಕಿ ಈ ವರ್ಷದ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೇರಬಲ್ಲ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ. ರಶ್ಯದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಫಿಫಾ ವಿಶ್ವಕಪ್-2018ರ ಡ್ರಾ ಪ್ರಕ್ರಿಯೆಯಲ್ಲಿ ಎ ಗುಂಪಿನಲ್ಲಿ ಆತಿಥೇಯ ರಶ್ಯ, ಉರುಗ್ವೆ, ಈಜಿಪ್ಟ್ ಹಾಗೂ ಸೌದಿ ಅರೇಬಿಯ ತಂಡಗಳು ಸ್ಥಾನ ಪಡೆದಿದ್ದವು.
‘ಎ’ ಗುಂಪಿನಲ್ಲಿ ಈಜಿಪ್ಟ್ ಆಟಗಾರ ಮುಹಮ್ಮದ್ ಸಲಾಹ್ ಈಗಲೂ ತಾರಾಕ ರ್ಷಣೆ ಇರುವ ಆಟಗಾರನಾಗಿದ್ದಾರೆ. ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಸಲಾಹ್‌ಗೆಭುಜನೋವು ಕಾಣಿಸಿಕೊಂಡಿತ್ತು. ಗ್ರೂಪ್ ಹಂತದಲ್ಲಿ ಒಂದು ಅಥವಾ ಎರಡು ಪಂದ್ಯಗಳಲ್ಲಿ ಸ್ಟಾರ್ ಫಾರ್ವರ್ಡ್ ಆಟಗಾರ ಸಲಾಹ್ ಅನುಪಸ್ಥಿತಿಯಲ್ಲಿ ಆಡುವ ಸಾಧ್ಯತೆಯಿದೆ. ಸಲಾಹ್ ಅನುಪಸ್ಥಿತಿಯಲ್ಲಿ ಈಜಿಪ್ಟ್ ಎದುರಾಳಿ ತಂಡಕ್ಕೆ ಸವಾಲಾಗುವ ಸಾಧ್ಯತೆ ಕಡಿಮೆಯಿದೆ.
ರಶ್ಯ ತಂಡ 10 ವರ್ಷಗಳ ಹಿಂದೆ ಯುರೋ ಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿತ್ತು. 2014ರ ವಿಶ್ವಕಪ್‌ನಲ್ಲಿ ಗ್ರೂಪ್ ಹಂತ ದಾಟಲು ವಿಫಲವಾಗಿರುವ ರಶ್ಯ ‘ಎ’ ಗುಂಪಿನಲ್ಲಿರುವ ದುರ್ಬಲ ತಂಡವಾಗಿದೆ. ಮಾಸ್ಕೊದ ಗೋಲ್‌ಕೀಪರ್ ಇಗೊರ್ ಅಕಿನ್‌ಫೀವ್ ತಂಡವನ್ನು ಮುನ್ನಡೆಸಲಿದ್ದಾರೆ. ಎರಡು ಬಾರಿಯ ಚಾಂಪಿಯನ್ ಉರುಗ್ವೆ ಎ ಗುಂಪಿನಲ್ಲಿರುವ ಬಲಿಷ್ಠ ತಂಡವಾಗಿದೆ. ಲೂಯಿಸ್ ಸುಯರೆಝ್ ಹಾಗೂ ಎಡಿನ್ಸನ್ ಕವಾನಿ ಹಾಗೂ ಕೋಚ್ ಆಸ್ಕರ್ ಟಬರೆಝ್ ತಂಡದ ಶಕ್ತಿಗಳಾಗಿದ್ದಾರೆ.
ಡಿಯಾಗೊ ಗೊಡಿನ್ ನೇತೃತ್ವದಲ್ಲಿ ಉರುಗ್ವೆ ಬ್ಯಾಕ್‌ಲೈನ್ ಬಲಿಷ್ಠ ವಾಗಿದೆ. ಮಿಡ್‌ಫೀಲ್ಡ್ ವಿಭಾಗ ಹಿರಿಯರು ಹಾಗೂ ಯುವಕರ ಮಿಶ್ರಣವಾಗಿದ್ದು ನಾಕೌಟ್ ಹಂತಕ್ಕೇರುವ ಫೇವರಿಟ್ ತಂಡವಾಗಿದೆ.







