ಕಾಸರಗೋಡು : ನಗರಸಭೆ ಕಾರ್ಯಾಲಯಕ್ಕೆ ಸಿಪಿಎಂ ಮುತ್ತಿಗೆ

ಕಾಸರಗೋಡು, ಜೂ. 7: ಕಾಸರಗೋಡು ನಗರಸಭೆಯಲ್ಲಿ ಭ್ರಷ್ಟಾಚಾರ, ದುರಾಡಳಿತ ನಡೆಯುತ್ತಿದೆ ಎಂದು ಆರೋಪಿಸಿ ಕಾಸರಗೋಡು ನಗರಸಭಾ ಸಿಪಿಎಂ ಸಮಿತಿ ನೇತೃತ್ವದಲ್ಲಿ ಗುರುವಾರ ಕಾಸರಗೋಡು ನಗರಸಭಾ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ನಗರಸಭಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು. ಬಳಿಕ ನಡೆದ ಪ್ರತಿಭಟನೆಯನ್ನು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸಿ . ಎಚ್ ಕುಞoಬು ಉದ್ಘಾಟಿಸಿದರು. ವಿದ್ಯಾನಗರ ಸ್ಥಳೀಯ ಸಮಿತಿ ಕಾರ್ಯದರ್ಶಿ ಅನಿಲ್ ಚೆನ್ನಿಕ್ಕರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಮಿತಿ ಸದಸ್ಯರಾದ ಟಿ .ಕೆ ರಾಜನ್ , ಎಂ . ಸುಮತಿ, ವಲಯ ಕಾರ್ಯದರ್ಶಿ ಕೆ . ಎ ಮುಹಮ್ಮದ್ ಹನೀಫ್ , ಕೆ . ಭಾಸ್ಕರನ್ , ಕೆ . ದಿನೇಶ್ ಮೊದಲಾದವರು ಮಾತನಾಡಿದರು.
Next Story





