ಸುಲಿಗೆ ಪ್ರಕರಣ: ಅಬು ಸಲೇಂಗೆ 7 ವರ್ಷ ಜೈಲು

ಹೊಸದಿಲ್ಲಿ, ಜೂ.7: 2002ರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ಅಬು ಸಲೇಂಗೆ ದಿಲ್ಲಿಯ ನ್ಯಾಯಾಲಯವೊಂದು 7 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಸಲೇಂ ದೋಷಿ ಎಂದು ಮೇ 26ರಂದು ನ್ಯಾಯಾಲಯವು ತೀರ್ಪು ನೀಡಿತ್ತು. ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಶ್ ನ ನಿವಾಸಿ ಅಶೋಕ್ ಗುಪ್ತಾ ಎಂಬ ಉದ್ಯಮಿಯಿಂದ 5 ಕೋಟಿ ರೂ. ನೀಡುವಂತೆ ಸಲೇಂ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಗುಪ್ತಾ ಸಲೇಂ ವಿರುದ್ಧ ಪ್ರಕರಣ ದಾಖಲಿಸಿದ್ದರು.
Next Story





