ಬೆಂಗಳೂರು ವಿವಿ ಪರೀಕ್ಷೆ: ಶುಲ್ಕ ಪಾವತಿಗೆ ಜೂ.14 ಕೊನೆಯ ದಿನ
ಬೆಂಗಳೂರು, ಜೂ.7: ಬೆಂಗಳೂರು ವಿಶ್ವ ವಿದ್ಯಾಲಯದ 2018ನೆ ಸಾಲಿನ ಬಿಪಿ ಇಡಿ 2 ಮತ್ತು 4ನೆ ಸೆಮಿಸ್ಟರ್ ಪರೀಕ್ಷೆ ಬರೆಯುವ ಹೊಸ ವಿದ್ಯಾರ್ಥಿಗಳು ಮತ್ತು ಮರು ಪರೀಕ್ಷೆ ಬರೆಯುವವರು ಪರೀಕ್ಷಾ ಶುಲ್ಕ ಪಾವತಿ ಮತ್ತು ಅರ್ಜಿ ಸಲ್ಲಿಕೆಗೆ ಜೂ.14 ಕೊನೆ ದಿನವಾಗಿದೆ. 200ರೂ.ದಂಡ ಸಹಿತ ಅರ್ಜಿ ಸಲ್ಲಿಸಲು ಜೂ.18 ಕೊನೆ ದಿನವಾಗಿದ್ದು, ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಲು ಜೂ.20ಕೊನೆ ದಿನವಾಗಿದೆ ಎಂದು ಮೌಲ್ಯಮಾಪನಾ ಕುಲಸಚಿವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಮರು ವೌಲ್ಯಮಾಪನಕ್ಕೆ ಅರ್ಜಿ: ನಗರದ ಬೆಂಗಳೂರು ವಿವಿಯ ಎಂಎಸ್ಸಿ ಪರಿಸರ ವಿಜ್ಞಾನ ವಿಭಾಗದ 3ನೆ ಸೆಮಿಸ್ಟರ್ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಶುಲ್ಕ ಪಾವತಿ ಮತ್ತು ಫೋಟೊ ಕಾಪಿಗಾಗಿ ಅರ್ಜಿ ಸಲ್ಲಿಸಲು ಜೂ.19 ಕೊನೆ ದಿನವಾಗಿದೆ.
ವಿಭಾಗ/ಕಾಲೇಜು ಅರ್ಜಿದಾರರ ಪಟ್ಟಿಯನ್ನು 25 ರೊಳಗಾಗಿ ಸಿದ್ಧಪಡಿಸಿ ಅರ್ಜಿಗಳೊಂದಿಗೆ ನಕಲು ಪಟ್ಟಿಯನ್ನು ಸಲ್ಲಿಸಬೇಕೆಂದು ವಿವಿಯ ಮೌಲ್ಯಮಾಪನಾ ವಿಭಾಗದ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





