ಬೆಂಗಳೂರು: ರಷ್ಯಾ ಮೂಲದ ರೋಗಿಗೆ ಯಶಸ್ವಿ ಚಿಕಿತ್ಸೆ

ಬೆಂಗಳೂರು, ಜೂ. 7: ‘ಏಟ್ರಿಯಲ್ ಫಿಬ್ರಿಲೇಶನ್’ನಿಂದ ಬಳಲುತ್ತಿದ್ದ ರಷ್ಯಾ ಮೂಲದ ರೋಗಿಯೊಬ್ಬರಿಗೆ ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಶನ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡುವ ಮೂಲಕ ಗುಣಪಡಿಸಲಾಗಿದೆ.
ಗುರುವಾರ ಇಲ್ಲಿನ ರಿಚ್ಮಂಡ್ ರಸ್ತೆಯ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಯೋಗೇಶ್ ಕೊತಾರಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿ, ಏಟ್ರಿಯಲ್ ಫಿಬ್ರಿಲೇಶನ್ ಒಂದು ಸಾಮಾನ್ಯ ರೋಗ ಎನಿಸಿದರೂ ಗಂಭೀರ ಸ್ವರೂಪದ ಪರಿಣಾಮಗಳಿಗೆ ಕಾರಣವಾಗುತ್ತದೆ. ಇದು ರೋಗಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಅಲ್ಬೇಶನ್ ಇಂತಹ ರೋಗವನ್ನು ಸಂಪೂರ್ಣವಾಗಿ ಶಮನ ಮಾಡುತ್ತದೆ. ಇದೊಂದು ಅತ್ಯಂತ ಸಂಕೀರ್ಣ ಚಿಕಿತ್ಸಾ ಪದ್ಧತಿಯಾಗಿದೆಯಾದರೂ, ನುರಿತ ತಜ್ಞರು ನಡೆಸಿದಾಗ ಮಾತ್ರ ಇದು ಸಂಪೂರ್ಣ ಸುರಕ್ಷಿತ ವಿಧಾನ ಎಂದು ವಿವರಿಸಿದರು.
Next Story





