ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ: ಆರೋಪಿ ಸೆರೆ
ಮಂಗಳೂರು, ಜೂ. 7: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 21,52,300 ರೂ. ಮೌಲ್ಯದ 699 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಬಂಟ್ವಾಳ ಮಾಣಿಲ ನಿವಾಸಿ ಉಮರ್ ಫಾರೂಕ್ (28) ಬಂಧಿತ ಆರೋಪಿ.
ಈತ ಬುಧವಾರ ಸಂಜೆ 6.15ಕ್ಕೆ ದುಬೈಯಿಂದ ಸ್ಪೈಸ್ ಜೆಟ್ ಎಸ್‌ಜಿ ವಿಮಾನ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಪ್ರಯಾಣಿಕರ ಲಗೇಜು ತಪಾಸಣೆ ಸಂದರ್ಭ ಉಮರ್ ಫಾರೂಕ್ ಬ್ಯಾಗ್‌ನಲ್ಲಿ ಮಲ್ಟಿ ಮೀಡಿಯಾ ಸ್ಪೀಕರ್ ಪತ್ತೆಯಾಗಿದೆ. ಸ್ಪೀಕರ್‌ನ ಒಳಗಡೆ 6 ಚಿನ್ನದ ಬಾರ್‌ಗಳನ್ನು ಇಟ್ಟಿರುವುದು ಪತ್ತೆಯಾಗಿದೆ. ಇದು 24 ಕ್ಯಾರೆಟ್ ಶುದ್ಧತೆ ಚಿನ್ನವಾಗಿದೆ. ಕೂಡಲೇ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
Next Story





