ಜಾರ್ಖಂಡ್‌ನಲ್ಲಿ ಮಾವೋಗಳ ವಿರುದ್ಧ ಎನ್‌ಕೌಂಟರ್: ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೊ ಸಾವು

ರಾಂಚಿ, ಜೂ. 7: ಜಾರ್ಖಂಡ್‌ನ ಸೆರೈಕೆಲಾ ಪ್ರದೇಶದಲ್ಲಿ ಗುರುವಾರ ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರ ಮೀಸಲು ಪಡೆಯ ಕೋಬ್ರಾ ಕಮಾಂಡೊ ಮೃತಪಟ್ಟಿದ್ದಾರೆ ಹಾಗೂ ಪೊಲೀಸ್ ಗಾಯಗೊಂಡಿದ್ದಾರೆ.
ಸರೈಕೆಲಾ-ಖರ್ಸಾವನ್ ಜಿಲ್ಲೆಯ ದಾಲ್‌ಭಾಗ್-ಆರ್ಕಿ ಪ್ರದೇಶದಲ್ಲಿ ಮುಂಜಾನೆ 7 ಗಂಟೆಗೆ ಗುಂಡಿನ ಚಕಮಕಿ ಆರಂಭವಾಯಿತು. ಕೋಬ್ರಾದ 209ನೇ ಬೆಟಾಲಿಯನ್ ಕೋಬ್ರಾ ಹಾಗೂ ಜಾರ್ಖಂಡ್ ಪೊಲೀಸ್‌ನ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್ ಸಂದರ್ಭ ಕಮಾಂಡೊ ಮೃತಪಟ್ಟಿದ್ದಾರೆ ಹಾಗೂ ರಾಜ್ಯ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳ ಸರೈಕೆಲಾ ಸರೈಕೆಲಾ ಖರ್ಸವಾನ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರ ಕಚೇರಿ. ಇದು ರಾಜ್ಯ ರಾಜಧಾನಿಯಿಂದ 135 ಕಿ.ಮೀ. ದೂರದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
Next Story





