ಕಸಾಪದಿಂದ ಮಕ್ಕಳ ಸ್ವರಚಿತ ಕಥೆ-ಕವನಗಳ ಆಹ್ವಾನ
ಚಿಕ್ಕಮಗಳೂರು ಜೂ.7 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜುಲೈ ತಿಂಗಳಿನಲ್ಲಿ ಆಯೋಜಿಸಲಿರುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ 'ಅರಳು ಪ್ರತಿಭೆ' ಸ್ಮರಣ ಸಂಚಿಕೆಯನ್ನು ಹೊರತರಲಿರುವ ಹಿನ್ನೆಲೆಯಲ್ಲಿ ಮಕ್ಕಳಿಂದ ಸ್ವರಚಿತ ಕಥೆ-ಕವನಗಳನ್ನು ಆಹ್ವಾನಿಸಿದೆ.
ಮೂರನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಮಕ್ಕಳು 150 ಪದಗಳಿಗೆ ಮೀರದ ಒಂದು ಸ್ವರಚಿತ ಕವನ, ಎರಡು ಪುಟದ ಒಂದು ಸ್ವರಚಿತ ಕಥೆ, ನನ್ನ ಕನಸು ಮತ್ತು ನನ್ನ ಮನಸು ಶೀರ್ಷಿಕೆಯಡಿಯಲ್ಲಿ ಭವಿಷ್ಯದಲ್ಲಿ ನಾನೇನು ಮಾಡಬೇಕೆಂಬುದರ ಬಗ್ಗೆ ಒಂದು ಪುಟಕ್ಕೆ ಮೀರದಂತೆ ಪ್ರಬಂಧವನ್ನು ಬರೆದು ಕಳುಹಿಸಬಹುದು.
ಪರಿಸರ ಸಂರಕ್ಷಣೆ, ಭಯೋತ್ಪಾದನೆ ನಿಗ್ರಹ, ಲಂಚ ವಿರೋಧಿ ಭಾವನೆಯನ್ನು ಪ್ರತಿಬಿಂಬಿಸುವ ಒಂದು ಪುಟದ ಸ್ವರಚಿತ ಚಿತ್ರವನ್ನು ಕಳುಹಿಸಬಹುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.
ಆಸಕ್ತ ಮಕ್ಕಳು ಜೂ.30 ರ ಒಳಗೆ ಜಿಲ್ಲಾ ಸುವರ್ಣ ಕನ್ನಡ ಭವನ, ಕೆಂಪನಹಳ್ಳಿ ಚಿಕ್ಕಮಗಳೂರು ಈ ವಿಳಾಸಕ್ಕೆ ಕಳುಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ 9449736868 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.





