ಶೃಂಗೇರಿ: ಮತದಾನ ಶಾಂತಿಯುತ

ಶೃಂಗೇರಿ, ಜೂ.8: ತಾಲೂಕಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.
ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 133 ಮತದಾರರಿದ್ದು, 127 ಮತಗಳು ಚಲಾವಣೆಗೊಂಡುವು. ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್, ಕಾಂಗ್ರೆಸ್‍ನಿಂದ ಕೆ.ಕೆ.ಮಂಜುನಾಥ್ ಕುಮಾರ್, ಜೆಡಿಎಸ್‍ನ ಭೋಜೆಗೌಡ ಹಾಗೂ ಒಂಭತ್ತು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪದವೀಧರ ಕ್ಷೇತ್ರದಲ್ಲಿ ಒಟ್ಟು 267 ಮತಗಳಿದ್ದು, ಅವುಗಳ ಪೈಕಿ 219 ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅಯನೂರು ಮಂಜುನಾಥ್, ಜೆಡಿಎಸ್‍ನಿಂದ ಅರುಣ್ ಕುಮಾರ್, ಕಾಂಗ್ರೆಸ್‍ನಿಂದ ಎಸ್.ಟಿ.ದಿನೇಶ್, ಸರ್ವಜನ ಪಾರ್ಟಿಯಿಂದ ಜೆ.ಸಿ.ಪಟೇಲ್ ಹಾಗೂ ಪಕ್ಷೇತರ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನವು ಶಾಂತಿಯುತವಾಗಿ ನಡೆದಿದ್ದು, ಚುನಾವಣಾಧಿಕಾರಿಯಾಗಿ ಹೇಮಲತಾ ಅವರು ಕಾರ್ಯನಿರ್ವಹಿಸಿದರು.
Next Story





