ಬಾವಿಗೆ ರಿಂಗ್ ಇಳಿಸುವಾಗ ಬಿದ್ದು ಕೂಲಿ ಕಾರ್ಮಿಕ ಮೃತ್ಯು
ಪುತ್ತೂರು, ಜೂ. 8: ಬಾವಿಗೆ ರಿಂಗ್ ಇಳಿಸುವ ವೇಳೆ ಕೂಲಿ ಕಾರ್ಮಿಕರೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಾಡಾವಿನ ತ್ಯಾಗರಾಜ ನಗರದಲ್ಲಿ ಗುರುವಾರ ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ ಸಂಜೀವ ಸಪಲ್ಯ ಎಂಬವರ ಪುತ್ರ ಬಾಲಕೃಷ್ಣ (29) ಮೃತಪಟ್ಟವರು. ಬಾಲಕೃಷ್ಣ ಅವರು ಮಾಡಾವಿನ ತ್ಯಾಗರಾಜ ನಗರದಲ್ಲಿ ಮನೆಯೊಂದರ ಸಮೀಪ ಬಾವಿಗೆ ರಿಂಗ್ ಇಳಿಸುವ ಕೆಲಸದಲ್ಲಿ ನಿರ್ವಹಿಸಿ ಬಾವಿಯಿಂದ ಮೇಲಕ್ಕೆ ಹಗ್ಗದಲ್ಲಿ ಹತ್ತುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದ ಅವರು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಬಳಿಕ ಅವರ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ. ಮೃತರು 2 ವರ್ಷದ ಹಿಂದೆ ವಿವಾಹವಾಗಿದ್ದು, ಪತ್ನಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





