Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶಿಕ್ಷಣ ಸಾಲ ಪಡೆಯುತ್ತೀರಾ...? ಹಾಗಾದರೆ...

ಶಿಕ್ಷಣ ಸಾಲ ಪಡೆಯುತ್ತೀರಾ...? ಹಾಗಾದರೆ ಮೊದಲು ಈ ಕೆಲಸ ಮಾಡಿ

ವಾರ್ತಾಭಾರತಿವಾರ್ತಾಭಾರತಿ8 Jun 2018 6:39 PM IST
share
ಶಿಕ್ಷಣ ಸಾಲ ಪಡೆಯುತ್ತೀರಾ...? ಹಾಗಾದರೆ ಮೊದಲು ಈ ಕೆಲಸ ಮಾಡಿ

ಶಿಕ್ಷಣದ ವಾಣಿಜ್ಯೀಕರಣವಾಗಿರುವ ಈ ಕಾಲದಲ್ಲಿ ಮಕ್ಕಳಿಗೆ ಪದವಿ ಶಿಕ್ಷಣವನ್ನೂ ಕೊಡಿಸುವುದೇ ಹೆಚ್ಚಿನ ಹೆತ್ತವರಿಗೆ ದೊಡ್ಡ ತಲೆನೋವಾಗಿದೆ. ಕಾಲೇಜುಗಳಲ್ಲಿ ಡೊನೇಷನ್ ಹಾವಳಿ,ಅತಿಯಾದ ಶಿಕ್ಷಣ ಶುಲ್ಕ ಮತ್ತು ಇತರ ಶುಲ್ಕಗಳು ಯಾರಿಗೇಆದರೂ ಒಜ್ಜೆಯೇ. ಇಂತಹುದರಲ್ಲಿ ಮಕ್ಕಳನ್ನು ಇಂಜಿನಿಯರ್ ಅಥವಾ ವೈದ್ಯರನ್ನಾಗಿ ಮಾಡಬೇಕೆಂದು ಬಯಸುವ ಪೋಷಕರು ಅದಕ್ಕಾಗಿಯೇ ಕಷ್ಟಪಟ್ಟು ಉಳಿಸಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಇಂತಹ ಸಂದರ್ಭ ದಲ್ಲಿ ಶಿಕ್ಷಣ ಸಾಲ ವಿದ್ಯಾರ್ಥಿಯು ಶಿಕ್ಷಣವನ್ನು ಮುಂದುವರಿಸಲು ನೆರವಾಗುತ್ತದೆ.

ಶಿಕ್ಷಣ ಸಾಲವನ್ನು ಪಡೆಯುವ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ಐದು ಅಗತ್ಯ ಅಂಶಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ.

* ಶಿಕ್ಷಣ ಸಾಲವನ್ನು ಪಡೆಯುವ ಉದ್ದೇಶ ಸ್ಪಷ್ಟವಾಗಿರಲಿ

ನಿಮ್ಮ ಗುರಿಗಳು ಮತ್ತು ಉದ್ಯೋಗ ಸಾಧ್ಯತೆಗಳು ಹಾಗೂ ನೀವು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಈ ಗುರಿಗಳನ್ನು ಸಾಧಿಸುವಲ್ಲಿ ಹೇಗೆ ನೆರವಾಗುತ್ತದೆ ಎಂಬ ಬಗ್ಗೆ ಮೊ ದಲು ಚಿಂತನೆ ನಡೆಸಿ. ನೀವು ಆ ಕೋರ್ಸ್‌ಗೆ ಪ್ರವೇಶ ಪಡೆಯಲು ಅಗತ್ಯ ಮಾನದಂಡಗಳು,ಕೋರ್ಸ್‌ನ ಶುಲ್ಕಗಳು,ಸೌಲಭ್ಯಗಳು ಮತ್ತು ಲಾಭಗಳ ಬಗ್ಗೆ ತಿಳಿದುಕೊಳ್ಳಲು ವಿವಿಧ ಕಾಲೇಜುಗಳು ಮತ್ತು ವಿವಿಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಿ. ಈಗ ಇವೆಲ್ಲವನ್ನು ಹೋಲಿಸಿ ನಿಮಗೆ ಸೂಕ್ತವೆನಿಸುವ ಶಿಕ್ಷಣ ಸಂಸ್ಥೆಯನ್ನು ನಿರ್ಧರಿಸಿ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಮತ್ತು ನೀವು ಎಷ್ಟು ಬಾಧ್ಯತೆಯನ್ನು ಹೊರಲು ಸಿದ್ಧರಿದ್ದೀರಿ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ.

* ಸಂಭಾವ್ಯ ಉದ್ಯೋಗಾವಕಾಶಗಳು

ನೀವು ಪಿಯುಸಿ ಅಥವಾ ಪದವಿ ಶಿಕ್ಷಣ ಮುಗಿಸಿದ ಬೆನ್ನಲ್ಲೇ ಶಿಕ್ಷಣಸಾಲವನ್ನು ಪಡೆಯುತ್ತೀರೊ ಅಥವಾ ಕೆಲವು ವರ್ಷ ದುಡಿದು ನಿಮ್ಮ ಉದ್ಯೋಗಾವಕಾಶಗಳನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಹೆಚ್ಚಿನ ಶಿಕ್ಷಣವನ್ನು ಬಯಸಿದ್ದೀರೊ ಎನ್ನುವುದೂ ಮುಖ್ಯವಾಗುತ್ತದೆ. ನಿಮ್ಮ ಶಿಕ್ಷಣಕ್ಕೆ ಅನುಗುಣವಾಗಿ ಲಭ್ಯವಿರುವ ಉದ್ಯೋಗಾವಕಾಶಗಳು ಮತ್ತು ಕೋರ್ಸ್ ಮುಗಿಸಿದ ಬಳಿಕ ನಿಮ್ಮ ಸಂಭಾವ್ಯ ಗಳಿಕೆ ಸಾಮರ್ಥ್ಯದ ಬಗ್ಗೆ ವಿಚಾರ ಮಾಡಿ. ಇದು ಭವಿಷ್ಯದಲ್ಲಿ ನಿಮ್ಮ ಶಿಕ್ಷಣ ಸಾಲ ಮರುಪಾವತಿ ಸಾಮರ್ಥ್ಯದ ಉತ್ತಮ ಸೂಚಕವಾಗುತ್ತದೆ.

* ಸಾಲದ ನಿಬಂಧನೆಗಳು,ಬಡ್ಡಿ ಇತ್ಯಾದಿಗಳನ್ನು ಹೋಲಿಸಿ

ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಇಂತಹ ಸಾಲಗಳನ್ನು ನೀಡುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಸಾಲ ನಿಬಂಧನೆಗಳು,ಬಡ್ಡಿದರ,ಮರುಪಾವತಿ ಅವಧಿ,ಸಂಸ್ಕರಣ ಶುಲ್ಕ,ಅವಧಿಗೇ ಮುನ್ನವೇ ಸಾಲವನ್ನು ತೀರಿಸಿದರೆ ಅವು ವಿಧಿಸುವ ಶುಲ್ಕ ಇತ್ಯಾದಿಗಳನ್ನು ಪರಸ್ಪರ ಹೋಲಿಸಿ ನೋಡಿ. ಯಾವುದೇ ಗ್ಯಾರಂಟರ್ ಅಥವಾ ಕೋಲ್ಯಾಟರಲ್ ಶ್ಯುರಿಟಿಯ ಅಗತ್ಯವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ಪಡೆಯುವ ಸಾಲದಲ್ಲಿ ಟ್ಯೂಷನ್ ಫೀ,ಅಧ್ಯಯನ ಸಾಮಗ್ರಿ/ಉಪಕರಣ,ಹಾಸ್ಟೆಲ್ ವೆಚ್ಚ ಇತ್ಯಾದಿಗಳು ಸೇರುತ್ತವೆಯೇ ಮತ್ತು ನೀವು ನಿಮ್ಮ ಜೇಬಿನಿಂದ ಎಷ್ಟು ಹಣವನ್ನು ಭರಿಸಬೇಕಾಗುತ್ತದೆ ಎನ್ನುವುದನ್ನು ನೋಡಿಕೊಳ್ಳಿ.

* ಶಿಕ್ಷಣ ಸಾಲದ ತೆರಿಗೆ ಲಾಭವನ್ನು ತಿಳಿದುಕೊಳ್ಳಿ

ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 80ಇ ಅಡಿ ಶಿಕ್ಷಣ ಸಾಲಕ್ಕೆ ತೆರಿಗೆ ಕಡಿತಕ್ಕೆ ಅವಕಾಶವಿದೆ ಮತ್ತು ಇದು ಬಡ್ಡಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಸಾಲದ ಅಸಲು ಮೊತ್ತಕ್ಕಲ್ಲ. ಈ ರಿಯಾಯಿತಿಯು ನೋಂದಾಯಿತ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಪಡೆದ ಶಿಕ್ಷಣ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಸಾಲದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಇದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನೀವು ರಿಯಾಯಿತಿಯನ್ನು ಪಡೆಯಬಹುದಾದ ಬಡ್ಡಿಯ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ ಮತ್ತು ಈ ರಿಯಾಯಿತಿಯು ಎಂಟು ವರ್ಷಗಳವರೆಗೆ ಅಥವಾ ಬಡ್ಡಿಯ ಸಂಪೂರ್ಣ ಪಾವತಿಯ ವರೆಗೆ,ಇವುಗಳಲ್ಲಿ ಯಾವುದು ಮೊದಲೋ ಅಷ್ಟು ಅವಧಿಗೆ ದೊರೆಯುತ್ತದೆ.

* ಬ್ಯಾಕಪ್ ಪ್ಲಾನ್ ಇರಲಿ

ನೀವು ಶಿಕ್ಷಣ ಸಾಲ ಪಡೆದು ಶಿಕ್ಷಣವನ್ನು ಪೂರೈಸಿದ ಬಳಿಕ ಉದ್ಯೋಗಕ್ಕೆ ಸೇರಿಕೊಳ್ಳುತ್ತೀರಿ, ಸಾಲದ ಮರುಪಾವತಿಯನ್ನೂ ಆರಂಭಿಸುತ್ತೀರಿ. ಎಲ್ಲವೂ ಚೆನ್ನಾಗಿಯೇ,ನೀವು ಅಂದುಕೊಂಡಂತೆ ನಡೆಯುತ್ತಿರ ಬಹುದು. ಆದರೆ ದುರದೃಷ್ಟವಶಾತ್ ಯಾವುದೋ ಸಮಸ್ಯೆ ಎದುರಾಗಿ ಉದ್ಯೋಗ ಕಳೆದುಕೊಳ್ಳಬಹುದು. ಹೊಸ ಉದ್ಯೋಗವನ್ನೇನೋ ನೀವು ಹುಡುಕಿಕೊಳ್ಳಬಹುದಾದರೂ ಅದಕ್ಕೆ ಸಮಯಾವಕಾಶ ಅಗತ್ಯವಾಗುತ್ತದೆ. ಈ ಅವಧಿಯಲ್ಲಿ ನಿಮಗೆ ಆದಾಯವೂ ಇರುವುದಿಲ್ಲ. ಹಾಗಿದ್ದರೂ ನೀವು ಶಿಕ್ಷಣ ಸಾಲದ ಮರುಪಾವತಿಯನ್ನು ನಿಲ್ಲಿಸುವಂತಿಲ್ಲ. ಹೀಗಾಗಿ ನಿಮ್ಮ ವೆಚ್ಚಗಳ ಮೇಲೆ ನಿಯಂತ್ರಣವಿರಲಿ ಮತ್ತು ನಿಯಮಿತವಾಗಿ ಹಣವನ್ನು ಉಳಿತಾಯ ಮಾಡುತ್ತಿರಿ. ಕನಿಷ್ಠ ಏಳೆಂಟು ತಿಂಗಳಿನ ಖರ್ಚುಗಳಿಗೆ ಅಗತ್ಯವಾದ ತುರ್ತು ನಿಧಿ ನಿಮ್ಮ ಬಳಿಯಿರಲಿ,ಇದರಿಂದಾಗಿ ನೀವು ಸಾಲದ ಮರುಪಾವತಿಯನ್ನು ತಪ್ಪಿಸುವ ಸಂದರ್ಭವುಂಟಾಗುವುದಿಲ್ಲ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X