ಉಡುಪಿ: ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ನೇಣಿಗೆ ಶರಣಾದ ಗ್ರಾಪಂ ಸದಸ್ಯ

ಮಲ್ಪೆ, ಜೂ.8: ಕೌಟುಂಬಿಕ ಸಮಸ್ಯೆಯಿಂದ ಮನನೊಂದ ಗ್ರಾಪಂ ಸದಸ್ಯರೊಬ್ಬರು ತನ್ನ ಗೆಳೆಯರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ನೇಣಿಗೆ ಶರಣಾದ ಘಟನೆ ಮಲ್ಪೆಯ ಲಕ್ಷ್ಮೀನಗರ ಎಂಬಲ್ಲಿ ಗುರುವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಮಲ್ಪೆ ಕೊಡವೂರು ಲಕ್ಷ್ಮೀನಗರ ನಿವಾಸಿ ರಾಕೇಶ (31) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ರಾಕೇಶ್ ತನ್ನ ಗೆಳೆಯರಿಗೆ ವಾಟ್ಸ್ಆ್ಯಪ್ ಮೂಲಕ ‘ನಾನು ಜೀವನದಲ್ಲಿ ಬಾರಿ ನೊಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಸಂದೇಶ ಕಳುಹಿಸಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಮೊದಲ ಬಾರಿಗೆ ಕಡೆಕಾರ್ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿತರಾಗಿದ್ದರು. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ರಾಕೇಶ್, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





