ಸಿಸಿಬಿ ಪೊಲೀಸರ ಕಾರ್ಯಾಚರಣೆ: 22 ಲೋಡ್ ಮರಳು ವಶಕ್ಕೆ

ಮಂಗಳೂರು, ಜೂ. 8: ಮಂಗಳೂರು ನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕುಳ ಮೇರಮಜಲು ರಸ್ತೆಯಲ್ಲಿ ದಾಸ್ತಾನಿರಿಸಲಾಗಿದ್ದ 22 ಲೋಡ್ ಮರಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕ ಕೆ. ಶ್ರೀನಿವಾಸ ಅವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಅರ್ಕುಳ ಮೇರಮಜಲು ರಸ್ತೆಯಲ್ಲಿರುವ ಸರಕಾರಿ ಜಾಗ ಸರ್ವೆ ನಂಬ್ರ: 70/1ಬಿ ಯಲ್ಲಿ ಗೌಪ್ಯವಾಗಿ ದಾಸ್ತಾನು ಇರಿಸಿದ 22 ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





