ಮಂಡ್ಯ: ಸಾರಿಗೆ ಬಸ್ ಹರಿದು ಬೈಕ್ ಸವಾರ ಮೃತ್ಯು

ಮಂಡ್ಯ, ಜೂ.8: ಬೈಕ್‍ನಿಂದ ಅಯತಪ್ಪಿ ಬಿದ್ದ ವ್ಯಕ್ತಿ ಮೇಲೆ ಸಾರಿಗೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಮದ್ದೂರು ತಾಲೂಕು ಗೌಡಯ್ಯನದೊಡ್ಡಿ ಗೇಟ್ ಬಳಿ ಶುಕ್ರವಾರ ಜರುಗಿದೆ.
ಮಂಡ್ಯ ತಾಲೂಕಿನ ಕಬ್ಬನಹಳ್ಳಿ ಗ್ರಾಮದ ಶಿವಲಿಂಗಯ್ಯ(50) ಎಂಬವರೇ ಮೃತ ವ್ಯಕ್ತಿ. ಇವರು ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿಯ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆ.ಎಂ.ದೊಡ್ಡಿಗೆ ಕಾರ್ಯನಿಮಿತ್ತ ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಕೆ.ಎಂ.ದೊಡ್ಡಿ ಸರ್ಕಲ್ ಇನ್‍ಪೆಕ್ಟರ್ ನವೀನ್, ಸಬ್‍ಇನ್ಸ್ ಪೆಕ್ಟರ್ ಅಯ್ಯನಗೌಡ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





