ಬ್ರಹ್ಮಾವರ: ಬೆಂಕಿಗಾಹುತಿಯಾದ ಐ20 ಕಾರು

ಉಡುಪಿ, ಜೂ. 8: ಕುಂದಾಪುರ ಹಳ್ಳಿಹೊಳೆ ನಿವಾಸಿ ಕಾರ್ತಿಕ್ ಎಂಬವರ ಹುಂಡೈ ಐ20 ಕಾರು ಬ್ರಹ್ಮಾವರ ಭದ್ರಗಿರಿ ಎನ್.ಎಚ್. 66 ರಲ್ಲಿ ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೆಂಕಿಗೆ ಅಹುತಿಯಾಗಿದೆ.
ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಕಾರ್ತಿಕ್ ಅವರು 7 ತಿಂಗಳ ಹಿಂದೆ ಐ20 ಕಾರು ಖರೀದಿಸಿದ್ದರು. ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಈ ಬಗ್ಗೆ ಅರಿತ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
Next Story