ವಾಯುಪಡೆಯ ಜಾಗ್ವಾರ್ ವಿಮಾನ ಅಪಘಾತ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜೂ.8: ಭಾರತೀಯ ವಾಯುಪಡೆಯ ಜಾಗ್ವಾರ್ ವಿಮಾನ ಅಪಘಾತಕ್ಕೀಡಾದ ಘಟನೆ ಗುಜರಾತ್ನ ವಾಯುನೆಲೆ ಬಳಿ ನಡೆದಿದೆ. ವಿಮಾನದ ಪೈಲಟ್ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೈನಂದಿನ ತರಬೇತಿ ಮುಗಿಸಿ ವಾಯುನೆಲೆಯಲ್ಲಿ ವಿಮಾನವನ್ನು ಇಳಿಸಲು ಮುಂದಾದಾಗ ಸಮಸ್ಯೆ ಉಂಟಾಗಿದೆ. ಇದರಿಂದ ಸುಮಾರು 500 ಅಡಿಗಳಷ್ಟು ದೂರ ತೂಗಾಡುತ್ತಾ ಸಾಗಿದೆ. ಈ ಸಂದರ್ಭ ವಿಮಾನದ ಪೈಲಟ್ ಹೊರಗೆಸೆಯಲ್ಪಟ್ಟಿದ್ದಾರೆ. ಪೈಲಟ್ಗೆ ಗಂಭೀರ ಗಾಯವಾಗಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.
ಮೂರು ದಿನಗಳಲ್ಲಿ ಅಪಘಾತಕ್ಕೀಡಾದ ಎರಡನೇ ಜಾಗ್ವಾರ್ ವಿಮಾನ ಇದಾಗಿದೆ. ಕಳೆದ ನಾಲ್ಕು ದಶಕಗಳಿಂದ ಭಾರತೀಯ ವಾಯುಪಡೆಯಲ್ಲಿರುವ ಜಾಗ್ವಾರ್ ವಿಮಾನಗಳನ್ನು ಆಂಗ್ಲೊ- ಫ್ರೆಂಚ್ ಸಹಯೋಗದ ‘ಸೆಪೆಕಾಟ್’ ಸಂಸ್ಥೆಯ ಲೈಸೆನ್ಸ್ ಪಡೆದು ಭಾರತದಲ್ಲೇ ನಿರ್ಮಿಸಲಾಗುತ್ತಿದೆ.
Next Story







