ಇಂದಿನಿಂದ 18ನೇ ಶಾಂಘೈ ಸಹಕಾರ ಸಂಘಟನೆ ಶೃಂಗ ಸಮ್ಮೇಳನ

ಬೀಜಿಂಗ್, ಜೂ. 8: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯು ಭಾರತ ಮತ್ತು ಪಾಕಿಸ್ತಾನಗಳಿಗೆ ಸಹಕಾರ ಬಲಪಡಿಸಲು ಚೌಕಟ್ಟೊಂದನ್ನು ಒದಗಿಸುತ್ತದೆ ಎಂದು ಚೀನಾ ಹೇಳಿದೆ ಹಾಗೂ ಪ್ರಾದೇಶಿಕ ಶಾಂತಿಗಾಗಿ ಈ ಎರಡು ದೇಶಗಳು ಜೊತೆಯಾಗಿ ಕೆಲಸ ಮಾಡುತ್ತವೆ ಎಂಬ ವಿಶ್ವಾಸವನ್ನು ಅದು ವ್ಯಕ್ತಪಡಿಸಿದೆ.
ಅದೇ ವೇಳೆ, ಕಾಶ್ಮೀರ ವಿವಾದಕ್ಕೆ ಉಭಯ ದೇಶಗಳು ಮಾತುಕತೆಯ ಮೂಲಕ ಪರಿಹಾರವೊಂದನ್ನು ಕಂಡುಹಿಡಿಯುತ್ತವೆ ಎಂಬ ಭರವಸೆಯನ್ನೂ ‘ಹಿಂದೂಸ್ತಾನ್ ಟೈಮ್ಸ್’ಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಚೀನಾ ವಿದೇಶ ಸಚಿವಾಲಯ ವ್ಯಕ್ತಪಡಿಸಿದೆ.
ಶಾಂಘೈ ಸಹಕಾರ ಸಂಘಟನೆಯಂಥ ಬಹುಪಕ್ಷೀಯ ವೇದಿಕೆಯಲ್ಲಿ ಕಾಶ್ಮೀರ ಕುರಿತ ಮಾತುಕತೆಗಳಿಗೆ ಅವಕಾಶವಿಲ್ಲ ಎಂಬ ಇಂಗಿತವನ್ನು ಅದು ಈ ಮೂಲಕ ವ್ಯಕ್ತಪಡಿಸಿದೆ.
ಪೂರ್ವ ಚೀನಾದ ಕಿಂಗ್‌ಡಾವೊನಲ್ಲಿ ಜೂನ್ 9 ಮತ್ತು 10ರಂದು 18ನೇ ಶಾಂೈ ಸಹಕಾರ ಸಂಘಟನೆ ಶೃಂಗ ಸಮ್ಮೇಳನ ನಡೆಯಲಿದೆ ಹಾಗೂ ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
Next Story





