ನಮ್ಮ ಜೊತೆ ಸಹರಿ ಸೇವಿಸಿ ಎಂದು ವಿದ್ಯಾರ್ಥಿಗಳು ಆಹ್ವಾನಿಸಿದ್ದಕ್ಕೆ ಟರ್ಕಿ ಅಧ್ಯಕ್ಷ ಪ್ರತಿಕ್ರಿಯಿಸಿದ್ದು ಹೀಗೆ..

ಅಂಕಾರಾ, ಜೂ. 8: ಅಚ್ಚರಿಯ ನಡೆಯೊಂದರಲ್ಲಿ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ಅವರು ವಿವಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಖುದ್ದಾಗಿ ತೆರಳಿ ಅವರೊಂದಿಗೆ ಸಹರಿ (ಪವಿತ್ರ ರಮಝಾನ್ ತಿಂಗಳಲ್ಲಿ ನಸುಕಿನಲ್ಲಿ ಸೇವಿಸುವ ಭೋಜನ) ಯಲ್ಲಿ ಪಾಲ್ಗೊಂಡರು.
‘ತಾವು ನಮ್ಮಂದಿಗೆ ಸಹರಿ ಭೋಜನದಲ್ಲಿ ಪಾಲ್ಗೊಳ್ಳಬಹುದೇ’ ಎಂದು ವಿದ್ಯಾರ್ಥಿ ಗಂಗೊರ್ ಅತಕ್ ಅವರು ಟ್ವಿಟರ್‌ನಲ್ಲಿ ಅಧ್ಯಕ್ಷರಿಗೆ ಕೇಳಿದ್ದರು. ಈ ವಿಶಿಷ್ಟ ಬೇಡಿಕೆಗೆ ತಕ್ಷಣ ಪ್ರತಿಕ್ರಿಯಿಸಿದ್ದ ರಿಸೆಪ್ ತಯ್ಯಿಬ್ ಎರ್ದೊಗಾನ್ ಅವರು, ‘ನಿಮ್ಮ ಚಹಾ ಸಿದ್ಧವಾಗಿದ್ದರೆ ನಾನು ಈಗಲೇ ಬರುತ್ತೇನೆ’ ಎಂದು ಉತ್ತರಿಸಿದ್ದರು.
ಅಷ್ಟೇ ಅಲ್ಲ, ಕೆಲವೇ ನಿಮಿಷಗಳಲ್ಲಿ ಹಾಸ್ಟೆಲ್‌ನಲ್ಲಿ ಪ್ರತ್ಯಕ್ಷರಾದ ರಿಸೆಪ್ ತಯ್ಯಿಬ್ ಎರ್ದೊಗಾನ್ ವಿದ್ಯಾರ್ಥಿಗಳೊಂದಿಗೆ ಸಹರಿಯಲ್ಲಿ ಪಾಲ್ಗೊಂಡರಲ್ಲದೆ, ಅವರೊಂದಿಗೆ ಫೋಟೊ ಮತ್ತು ವೀಡಿಯೊ ಸೆಷನ್‌ಗಳಲ್ಲಿಯೂ ಭಾಗವಹಿಸಿದ್ದರು.
President Erdoğan accepts students’ Twitter invite to suhoor https://t.co/bB7Rt80qvK pic.twitter.com/TMPojQfWnQ
— Turkish Presidency (@trpresidency) June 1, 2018







